ಪರಿಸರ ನಾಶದೊಂದಿಗೆ ಪ್ರಾಣಿಗಳ ಆವಾಸ ಸ್ಥಾನದ ವಿನಾಶದ ಮೂಲಕ ಮಾನವರು ಬಹಳ ದೊಡ್ಡ ಹೇಯ ಕೃತ್ಯಗಳಿಗೆ ಮುಂದಾಗಿರುವ ನಡುವೆಯೇ ಅಲ್ಲಲ್ಲಿ ಮಾನವೀಯತೆ ಮೆರೆಯುವ ಮೂಲಕ ಸಂಕಷ್ಟದಲ್ಲಿ ಸಿಲುಕಿರುವ ಪ್ರಾಣಿಗಳ ನೆರವಿಗೆ ಬರುವ ಸಹೃದಯಿಗಳನ್ನು ನಾವು ನೋಡಬಹುದಾಗಿದೆ.
ಉತ್ತರ ಪ್ರದೇಶ ಮೋಹನ್ ಯಾದವ್ ಹೆಸರಿನ ಈ ವ್ಯಕ್ತಿ ಅರಣ್ಯ ಇಲಾಖೆಯಲ್ಲಿ ನೌಕರನಾಗಿದ್ದು, ಗಂಗಾ ಬ್ಯಾರೇಜ್ನಲ್ಲಿ ಸಿಲುಕಿದ್ದ ಜಿಂಕೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ರಮೇಶ್ ಪಾಂಡೆ ಶೇರ್ ಮಾಡಿದ್ದಾರೆ.