ಪ್ರಾಣಿಗಳು ಎಷ್ಟೇ ದೊಡ್ಡವಾಗಿ ಬೆಳೆದು ಬುದ್ಧಿ ಕಲಿತರೂ ಸಹ ಅವುಗಳಲ್ಲಿನ ಪ್ರೀತಿ, ಕಾಳಜಿ ಹಾಗೂ ಮಮಕಾರಗಳು ಯಾವತ್ತಿಗೂ ರಾಜಿಯಾಗದೇ ಉಳಿದುಕೊಂಡುಬಿಡುತ್ತವೆ. ಅವು ಮನುಷ್ಯರಿಗೆ ತೋರುವ ಪ್ರೀತಿ ಮಾತ್ರವಲ್ಲ ಖುದ್ದು ತಮ್ಮ ತಮ್ಮಲ್ಲೇ ತೋರಿಕೊಳ್ಳುವ ಅಕ್ಕರೆಯೂ ಸಹ ನೋಡಲು ಬಹಳ ಹೃದಯಸ್ಪರ್ಶಿಯಾಗಿರುತ್ತದೆ.
ರೋಮನ್ ಹಾಗೂ ಸ್ಪಾಂಕಿ ಎಂಬ ಎರಡು ಪಿಟ್ ಬುಲ್ ಶ್ವಾನಗಳ ನಡುವಿನ ಬಾಂಧವ್ಯ ಇದಕ್ಕೊಂದು ಉದಾಹರಣೆ. ಅನಾರೋಗ್ಯದಿಂದ ಬಳಲುತ್ತಿರುವ ರೋಮನ್ಗೆ ಚಿಕಿತ್ಸೆಯ ಅಗತ್ಯವಿದ್ದು, ಆತ ಬಹಳ ದಣಿದಿದ್ದ. ಇದಕ್ಕೆ ಸ್ಪಂದಿಸಿದ ಸ್ಪಾಂಕಿ, ತಾವು ಮಲಗಿಕೊಳ್ಳುವ ನೆಲಹಾಸನ್ನು ರೋಮನ್ ಬಳಿ ಎಳೆದುತಂದು, ಆತನ ಸಹೋದರನೊಂದಿಗೆ ಮಲಗುತ್ತಾನೆ.
ಶ್ವಾನಗಳಿಬ್ಬರ ನಡುವಿನ ಈ ನಿಷ್ಕಲ್ಮಶ ಬಾಂಧವ್ಯನ್ನು ವಿಡಿಯೋದಲ್ಲಿ ಸೆರೆ ಹಿಡಿದಿರುವ ಅವುಗಳ ಯಜಮಾನಿ ಬಿಲ್ ರೋಜರ್ಸ್, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
https://www.facebook.com/jrogers44/videos/10157768068249209/?t=0
https://www.instagram.com/p/Bmqs011lj5F/?utm_source=ig_embed