ಸಂಜೆ ಟೀ ಜತೆಗೆ ಸಮೋಸಾವಿದ್ದರೆ ಸಖತ್ ಆಗಿರುತ್ತದೆ ಅಂದುಕೊಳ್ಳುತ್ತಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿ ಸುಲಭವಾಗಿ ಮಾಡಬಹುದಾದ ಪಂಜಾಬಿ ಸಮೋಸಾವಿದೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
2 ಕಪ್ ಮೈದಾ, 4 ಟೇಬಲ್ ಸ್ಪೂನ್ – ಬಿಸಿ ಎಣ್ಣೆ, ¼ ಟೀ ಸ್ಪೂನ್ – ಓಂಕಾಳು, ಉಪ್ಪು – ರುಚಿಗೆ ತಕ್ಕಷ್ಟು. 2 – ಆಲೂಗಡ್ಡೆ, ½ ಕಪ್ – ಹಸಿ ಬಟಾಣಿ, 1 – ಹಸಿಮೆಣಸು, ½ ಇಂಚು – ಶುಂಠಿ ತುರಿ, ½ ಟೀ ಸ್ಪೂನ್ – ಗರಂ ಮಸಾಲ, ½ ಟೀ ಸ್ಪೂನ್ – ಧನಿಯಾ ಪುಡಿ, ½ ಟೀ ಸ್ಪೂನ್ – ಅರಿಶಿನ, ½ ಟೀ ಸ್ಪೂನ್ – ಜೀರಿಗೆ, ¼ ಟೀ ಸ್ಪೂನ್ – ಉಪ್ಪು, ಎಣ್ಣೆ – ಕರಿಯಲು.
ಮಾಡುವ ವಿಧಾನ:
ಒಂದು ದೊಡ್ಡ ಬೌಲ್ ಗೆ ಮೈದಾ, ಓಂ ಕಾಳು, ಎಣ್ಣೆ, ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. 10 ನಿಮಿಷಗಳ ಕಾಲ ಇದನ್ನು ಹಾಗೆಯೇ ಇಟ್ಟು ಬಿಡಿ. ಕುಕ್ಕರ್ ಗೆ ಆಲೂಗಡ್ಡೆ ಹಾಗೂ ಬಟಾಣಿಕಾಳು ಹಾಕಿ ಆವಿಯಲ್ಲಿ ಬೇಯಿಸಿಕೊಳ್ಳಿ.
ಆಲೂಗಡ್ಡೆಯ ಸಿಪ್ಪೆ ತೆಗೆದು ಸ್ವಲ್ಪ ಕೈಯಿಂದ ಹಿಸುಕಿಕೊಳ್ಳಿ. ನಂತರ ಒಂದು ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 2 ಟೀ ಸ್ಪೂನ್ ಎಣ್ಣೆ ಹಾಕಿ ನಂತರ ಅದಕ್ಕೆ ಜೀರಿಗೆ ಹಾಕಿ ಅದು ಸಿಡಿಯುತ್ತಲೆ ಹಸಿಮೆಣಸು, ಶುಂಠಿ ತುರಿ ಹಾಕಿ ಫ್ರೈ ಮಾಡಿ, ನಂತರ ಆಲೂಗಡ್ಡೆ, ಬಟಾಣಿ ಸೇರಿಸಿ ಉಪ್ಪು, ಅರಿಸಿನ, ಧನಿಯಾ ಪುಡಿ, ಗರಂ ಮಸಾಲ ಸೇರಿಸಿ 5 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ.
ನಂತರ ಮಾಡಿಟ್ಟುಕೊಂಡ ಮೈದಾ ಹಿಟ್ಟಿನ ಮಿಶ್ರಣದಿಂದ ಹದ ಗಾತ್ರದ ಉಂಡೆ ಮಾಡಿಕೊಂಡು ಚಪಾತಿ ರೀತಿ ಲಟ್ಟಿಸಿಕೊಳ್ಳಿ. ನಂತರ ಚಾಕುವಿನ ಸಹಾಯದಿಂದ ಇದನ್ನು ನಾಲ್ಕು ಭಾಗವಾಗಿ ಕತ್ತರಿಸಿಕೊಳ್ಳಿ. ಕತ್ತರಿಸಿಕೊಂಡ ಪೀಸ್ ಅನ್ನು ಕೋನ್ ಶೇಪ್ ಮಾಡಿಕೊಂಡು ಮಡಚಿ ಅದರೊಳಗೆ ಆಲೂಗಡ್ಡೆ ಮಿಶ್ರಣ ತುಂಬಿ ಕಾದ ಎಣ್ಣೆಯಲ್ಲಿ ಕರಿಯಿರಿ.