ಸಕ್ಕರೆ ಅಥವಾ ಬೆಲ್ಲ ತಯಾರಿಸುವ ವೇಳೆ ಉಳಿದ ಕೆಲವು ಪದಾರ್ಥಗಳನ್ನು ಬಳಸಿ ಸಾವಯವ ಪದ್ಧತಿಯಲ್ಲಿ ನೈಸರ್ಗಿಕವಾಗಿ ಕಲ್ಲು ಸಕ್ಕರೆ ತಯಾರಿಸುತ್ತಾರೆ. ಇದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.
ಚಳಿಗಾಲದಲ್ಲಿ ಕಾಳುಮೆಣಸಿನ ಜೊತೆ ಕಲ್ಲುಸಕ್ಕರೆ ಮಿಶ್ರಣ ಮಾಡಿ ಸೇವಿಸಿದರೆ ಶೀತದಿಂದ ಉಂಟಾದ ಗಂಟಲು ನೋವು ವಾಸಿಯಾಗುತ್ತದೆ. ಉಗುರು ಬೆಚ್ಚಗಿನ ನೀರಿಗೆ ಇವೆರಡನ್ನು ಬೆರೆಸಿ ಕುಡಿಯುವುದರಿಂದ ಕೆಮ್ಮು, ಸಿಂಬಳ ಸುರಿಯುವುದು ಕಡಿಮೆಯಾಗುತ್ತದೆ.
ಶೀತವಾದಾಗ ಹೋಗುವ ಬಾಯಿರುಚಿಯನ್ನು ಮರಳಿ ತಂದು ಕೊಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ವಾಕರಿಕೆ ಮತ್ತು ವಾಂತಿ ಸಮಸ್ಯೆಯನ್ನು ದೂರ ಮಾಡುತ್ತದೆ.
ಅಜೀರ್ಣದಿಂದ ಮಲಬದ್ಧತೆ ಉಂಟಾದರೆ ಕಲ್ಲು ಸಕ್ಕರೆಯನ್ನು ಬಾಯಲ್ಲಿಟ್ಟು ಸ್ವಲ್ಪ ಸ್ವಲ್ಪವೇ ಅದರ ರಸ ಸವಿಯಿರಿ. ಇದರಿಂದ ನಿಮ್ಮ ಜೀರ್ಣಕ್ರಿಯೆ ಬಲ ಪಡೆದುಕೊಳ್ಳುತ್ತದೆ. ಕಲ್ಲುಸಕ್ಕರೆ ಸೇವನೆಯಿಂದ ದೇಹಕ್ಕೆ ಚೈತನ್ಯ ಸಿಕ್ಕು ಮಾನಸಿಕ ಅರೋಗ್ಯ ಉತ್ತಮಗೊಂಡು ಮನಸ್ಸು ಮತ್ತು ದೇಹ ಸದಾ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ದಿನನಿತ್ಯ ಕಾಫಿ, ಚಹಾ ತಯಾರಿಸಲು ಸಕ್ಕರೆ ಬಳಸುವ ಬದಲು ಕಲ್ಲುಸಕ್ಕರೆ ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ.