ಯಾವುದಾದರೂ ವಿಶೇಷ ದಿನಕ್ಕೆ ಏನಾದರೂ ಸಿಹಿ ಮಾಡಬೇಕು ಅಂದುಕೊಂಡಿದ್ದೀರಾ ಹಾಗಾದ್ರೆ ಇಲ್ಲೊಂದು ಸಿಂಪಲ್ ಹಾಗೂ ರುಚಿಕರವಾದ ಹಲ್ವಾ ರೆಸಿಪಿ ಇದೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ತುರಿದ ಬಿಟ್ರೂಟ್-2 ಕಪ್, ತುಪ್ಪ-4 ಚಮಚ, ಗೋಡಂಬಿ ಚೂರು-2 ಟೇಬಲ್ ಸ್ಪೂನ್, ದ್ರಾಕ್ಷಿ-1/4 ಕಪ್, ಕಾಯಿಸಿದ ಹಾಲು-1 ಗ್ಲಾಸ್, ಏಲಕ್ಕಿ ಪುಡಿ-ಚಿಟಿಕೆ, ಸಕ್ಕರೆ-1 ಕಪ್.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದು ಬಿಸಿಯಾಗುತ್ತಲೇ ತುಪ್ಪ ಹಾಕಿ, ದ್ರಾಕ್ಷಿ, ಗೋಡಂಬಿ ಹಾಕಿ ಹುರಿದು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ನಂತರ ತುರಿದ ಬಿಟ್ರೂಟ್ ಹಾಕಿ 5 ನಿಮಿಷಗಳ ಕಾಲ ಫ್ರೈ ಮಾಡಿ. ಇದರ ಹಸಿ ವಾಸನೆ ಹೋಗಲಿ. ನಂತರ ಹಾಲು ಸೇರಿಸಿ ಹದ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಹಾಲು ಇಂಗಿದ ಬಳಿಕ ಸಕ್ಕರೆ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಬಿಟ್ರೂಟ್ ಮಿಶ್ರಣ ತಳಬಿಡುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ. ನಂತರ ಏಲ್ಕಕಿ ಪುಡಿ, ಹುರಿದ ಗೋಡಂಬಿ, ದ್ರಾಕ್ಷಿ ಸೇರಿಸಿ ಸರ್ವ್ ಮಾಡಿ.