ಇದು ಒಂದು ಮೊಟ್ಟೆಯ ಕಥೆಯಲ್ಲ. ಮೂರು ಮೊಟ್ಟೆಯ ಕಥೆ.
ಮಲೇಶಿಯಾದ ಕೌಲಾಲಂಪುರದಲ್ಲಿನ ಮೊಹಮ್ಮದ್ ಮುಕ್ಬಲ್ ಎಂಬ 20 ವರ್ಷದ ಯುವಕ ಹೆಣೆದ ಚೆಂದದ ಕಥೆ.
ಇದೀಗ ಗಿನ್ನಿಸ್ ದಾಖಲೆಯನ್ನೂ ನಿರ್ಮಿಸಿದ್ದು, ಈತನ ಸಾಹಸಕರ ವಿಡಿಯೋ ವೈರಲ್ ಆಗಿದೆ.
ಮೂರು ಮೊಟ್ಟೆಗಳನ್ನು ಒಂದರ ಮೇಲೊಂದರಂತೆ ನೇರವಾಗಿ ನಿಲ್ಲಿಸಿ, ಬಹಳ ಹೊತ್ತು ಬೀಳದಂತೆ ನೋಡಿಕೊಂಡಿದ್ದಾನೆ.
ಇದರಲ್ಲೇನಿದೆ ವಿಶೇಷ ? ಮೂರೇ ಮೂರು ಮೊಟ್ಟೆಗಳನ್ನು ಒಂದರ ಮೇಲೆ ಒಂದರಂತೆ ನಿಲ್ಲಿಸುವುದೇನು ಮಹಾ ? ಇದಕ್ಕೇಕೆ ಗಿನ್ನೀಸ್ ದಾಖಲೆಯ ಕಿರೀಟವೇಕೆ ಎಂದೆಲ್ಲ ಅನ್ನಿಸುತ್ತಿದೆ ಅಲ್ಲವೇ ?
ಹಾಗಿದ್ದರೆ ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿ. ದಾಖಲೆಯ ಎಗ್ ಟವರ್ ಮಾಡಲು ಬಳಸಿರುವುದು ಆಗಷ್ಟೇ ಕೋಳಿಯಿಂದ ಹೊರಬಂದ ಹೊಸ ಮೊಟ್ಟೆಗಳವು. ಯಾವುದೇ ಅಂಟು ಇಲ್ಲದ ರೀತಿಯ ಮೊಟ್ಟೆಗಳನ್ನು ಹೀಗೆ ನಿಲ್ಲಿಸುವುದು ಸುಲಭದ ಮಾತಲ್ಲ. ಅದೂ ಕಡಿಮೆ ಸಮಯದಲ್ಲಿ.