ಸಾರ್ವಜನಿಕರ ಬದುಕನ್ನು ಕಂಗೆಡಿಸಿರುವ ಕೊರೊನಾ ಮಹಾಮಾರಿ, ದಿನದಿಂದ ದಿನಕ್ಕೆ ತನ್ನ ಆರ್ಭಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಈ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಸ್ಯಾನಿಟೈಸರ್ ಅಥವಾ ಸೋಪ್ ನಿಂದ ಪದೇ ಪದೇ ಕೈ ತೊಳೆದುಕೊಳ್ಳುವುದು ಅತಿ ಮುಖ್ಯವಾಗಿದೆ.
ಹೀಗಾಗಿ ಮಾರುಕಟ್ಟೆಗೆ ವಿವಿಧ ಸ್ಯಾನಿಟೈಸರ್ ಗಳು ಲಗ್ಗೆ ಇಟ್ಟಿರುವ ಮಧ್ಯೆ ಶಿವಮೊಗ್ಗ ಜಿಲ್ಲೆಯ ಯುವ ಉದ್ಯಮಿ ನಿವೇದನ್, ಅಡಿಕೆಯಿಂದ ಸ್ಯಾನಿಟೈಸರ್ ತಯಾರಿಸಿದ್ದಾರೆ.
ಯಾವುದೇ ಸಿಂಥೆಟಿಕ್ ಬಳಸದೆ ನೈಸರ್ಗಿಕವಾಗಿ ಈ ಸ್ಯಾನಿಟೈಸರ್ ತಯಾರಿಸಲಾಗಿದ್ದು, ಶೇ.70 ರಷ್ಟು ಆಲ್ಕೋಹಾಲ್ ಅಂಶವಿದೆ ಎಂದು ಹೇಳಲಾಗಿದೆ. ಆಯುಷ್ ಇಲಾಖೆಗೆ ಅನುಮತಿಗಾಗಿ ಕಳುಹಿಸಿಕೊಡಲಾಗಿದ್ದು, ಒಪ್ಪಿಗೆ ಸಿಕ್ಕ ಬಳಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.