ಬೆಳಿಗ್ಗೆ ಇಡ್ಲಿ, ದೋಸೆ ಮಾಡಿದಾಗ ಚಟ್ನಿ ಮಾಡುವುದೇ ದೊಡ್ಡ ತಲೆಬಿಸಿ. ದಿನಾ ಒಂದೇ ರೀತಿ ಚಟ್ನಿ ತಿಂದು ಬೋರ್ ಆಗಿದ್ದರೆ ಈ ಟೊಮೆಟೊ, ಪುದೀನಾ ಚಟ್ನಿ ಮಾಡಿನೋಡಿ.
ಬೇಕಾಗುವ ಸಾಮಗ್ರಿಗಳು:
ಟೊಮೆಟೊ-2, ಪುದೀನಾ ಸೊಪ್ಪು-1/2 ಕಪ್, ಸಣ್ಣ ಈರುಳ್ಳಿ-10, ಹುಣಸೆಹಣ್ಣು- ಸಣ್ಣ ಪೀಸ್, ಒಣಮೆಣಸು-4, ತೆಂಗಿನಕಾಯಿ ತುರಿ-1 ಟೇಬಲ್ ಸ್ಪೂನ್, ಉದ್ದಿನಬೇಳೆ-1 ಟೇಬಲ್ ಸ್ಪೂನ್, ಎಣ್ಣೆ- 1 ಟೇಬಲ್ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಮೊದಲಿಗೆ ಪುದೀನಾ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ. ನಂತರ ಟೊಮೆಟೊವನ್ನು ಕತ್ತರಿಸಿಕೊಳ್ಳಿ. ಈರುಳ್ಳಿ ಸಿಪ್ಪೆ ತೆಗೆದಿಟ್ಟುಕೊಳ್ಳಿ.
ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿ ಉದ್ದಿನಬೇಳೆ, ಮೆಣಸು, ಹಾಕಿ ಹುರಿಯಿರಿ. ನಂತರ ಪುದೀನಾ, ಟೊಮೆಟೊ, ಈರುಳ್ಳಿ, ಹಸಿಮೆಣಸು ಸೇರಿಸಿ ಟೊಮೆಟೊ ಮೆತ್ತಗಾಗುವರೆಗೆ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ. ನಂತರ ಇದಕ್ಕೆ ತೆಂಗಿನಕಾಯಿ ತುರಿ ಸೇರಿಸಿ ಸ್ವಲ್ಪ ಮಿಕ್ಸ್ ಮಾಡಿಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಹುಣಸೆಹಣ್ಣು ಸೇರಿಸಿ ರುಬ್ಬಿ ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ. ನಂತರ ಒಗ್ಗರಣೆ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಇಂಗು ಕರಿಬೇವು ಹಾಕಿ ಅದನ್ನು ಚಟ್ನಿಗೆ ಹಾಕಿದರೆ ರುಚಿಕರವಾದ ಚಟ್ನಿ ಸವಿಯಲು ಸಿದ್ಧ.