ವೇಶ್ಯಾವಾಟಿಕೆ ಅಡ್ಡೆಯೊಂದಕ್ಕೆ ಭೇಟಿ ನೀಡಿದಾಗ ಅಲ್ಲಿನ ವಾಸ್ತವಿಕ ಚಿತ್ರಣವನ್ನು ವಿವರಿಸಿ ಕಲಾವಿದರಾದ ವಿನ್ಸೆಂಟ್ ವಾನ್ ಗೋ ಹಾಗೂ ಪೌಲ್ ಗೌಗಿನ್ ಬರೆದಿರುವ ಪತ್ರವೊಂದು 1.8 ಕೋಟಿ ರೂ.ಗಳಿಗೆ ಮಾರಾಟವಾಗಿದೆ.
ಈ ಪತ್ರವು 1888ರಷ್ಟು ಹಳೆಯದಾಗಿದ್ದು, ಆ ಕಾಲದಲ್ಲಿ ಕಲಾವಿದ ವಾನ್ ಗೋ ಫ್ರಾನ್ಸ್ನ ಆರ್ಲೆಸ್ ಎಂಬಲ್ಲಿಗೆ ಭೇಟಿ ನೀಡಿದಾಗಿನ ಅನುಭವನ್ನು ಇಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ಕಲಾವಿದ ಎಮಿಲಿ ಬರ್ನಾಡ್ ಈ ಪತ್ರದ ಸಹ ಬರಹಗಾರರಾಗಿದ್ದಾರೆ.
19ನೇ ಶತಮಾನದಲ್ಲಿ ಫ್ರಾನ್ಸ್ನ ವೇಶ್ಯಾಗೃಹವೊಂದರಲ್ಲಿ ತಾವು ಆಡಿದ ಆಟಗಳನ್ನೆಲ್ಲಾ ವಿವರಿಸಿ ಬರೆದುಕೊಂಡಿದ್ದಾರೆ ಈ ಕಲಾವಿದರು. ಈ ಪತ್ರವು ಹರಾಜಿನಲ್ಲಿ 210,000 ಯೂರೋಗಳಿಗೆ (1,80,50,512 ರೂ.ಗಳು) ಬಿಕರಿಯಾಗಿದೆ.