ಉತ್ತರ ಜಪಾನ್ನ ಆಗಸದಲ್ಲಿ ಬುಧವಾರ ಮುಂಜಾವಿನ ವೇಳೆ ಕಾಣಿಸಿಕೊಂಡ ಅಪರಿಚಿತ ವಸ್ತುವೊಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಸೆಂಡಾಯ್ ಎಂಬಲ್ಲಿಂದ ಸೆರೆಹಿಡಿಯಲಾದ ಈ ದೃಶ್ಯಾವಳಿಯಲ್ಲಿ ಬಲೂನ್ ರೀತಿಯ ವಸ್ತುವೊಂದು ಗಾಳಿಯಲ್ಲಿ ಸಾಕಷ್ಟು ಹೊತ್ತು ತೇಲಾಡುತ್ತಾ, ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
ಇದೊಂದು UFO ಇರಬಹುದು ಎಂದು ಕೆಲವು ಭಾವಿಸಿದರೆ, ಮತ್ತೆ ಕೆಲವರು ಅದನ್ನು ಕೊರೋನಾ ವೈರಸ್ ಹಬ್ಬಿಸಲು ಮಾಡಿರುವ ತಂತ್ರವೆಂದೂ ಅಥವಾ ಉತ್ತರ ಕೊರಿಯಾದ ಕುತಂತ್ರವೆಂದೂ ಮಾತನಾಡಿಕೊಳ್ಳುತ್ತಿದ್ದಾರೆ.