ಅಕಾಲಿಕ ಮರಣಕ್ಕೆ ತುತ್ತಾದ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಅಭಿಮಾನಿಗಳನ್ನು ಬಿಟ್ಟೂಬಿಡದೆ ಕಾಡುತ್ತಿದೆ.
ಪ್ರತಿಭಾವಂತ ನಟ, ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಶಾಕ್ ನಿಂದ ಹೊರಬರಲು ಕಷ್ಟವಾಗುತ್ತಿದೆ.
ಇದರ ನಡುವೆ ಸುಶಾಂತ್ ಬಾಲ್ಯ ಹಾಗೂ ಶಾಲಾ ದಿನಗಳ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅನೇಕರನ್ನು ಭಾವುಕರನ್ನಾಗಿಸಿದೆ.
ನೆನಪಿನಾಳದಲ್ಲಿ ಹುದುಗಿದ್ದ ಮುಗ್ಧ ಬಾಲಕ ಸುಶಾಂತ್, ಭಾವಚಿತ್ರಗಳು ಆ ದಿನಗಳಿಗೆ ಕೊಂಡೊಯ್ಯುವಂತಿವೆ. ಎಂಟು ವರ್ಷಗಳ ಹಿಂದೆ ಕಳೆದುಕೊಂಡ ತಾಯಿ, ಕುಟುಂಬ ಸದಸ್ಯರು, ಸ್ನೇಹಿತರ ಜೊತೆಗಿನ ಫೋಟೋಗಳು ಹಳೆಯ ನೆನಪುಗಳನ್ನು ತಂದು ಕೊಡುವಂತಿವೆ.