ಶ್ರಮಿಕ್ ಸ್ಪೆಷಲ್ ರೈಲಿನಲ್ಲಿ ಚಲಿಸುತ್ತಿದ್ದ ತಾಯಿಯೊಬ್ಬರ ಸಂಕಷ್ಟವನ್ನು ಕಂಡ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತೋರಿದ ಮಾನವೀಯತೆಯು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಮೆಹರುನ್ನಿಸಾ ಹೆಸರಿನ ಈ ಮಹಿಳೆ ತನ್ನ ಮಗುವಿಗೆ ನೀಡಲು ಹಾಲು ಬೇಕೆಂದು ಕೇಳಿಕೊಂಡಿದ್ದಾರೆ. ಇದನ್ನು ಕಂಡ ಸಹಾಯಕ ಸಬ್ ಇನ್ಸ್ಪೆಕ್ಟರ್ ತಮ್ಮ ಮನೆಗೆ ದೌಡಾಯಿಸಿ ಮಗುವಿಗೆ ಹಾಲು ತಂದುಕೊಟ್ಟಿದ್ದಾರೆ.
ಅಧಿಕಾರಿಯ ಈ ಮಾನವೀಯ ನಡೆಯನ್ನು ರಾಂಚಿಯ ವಿಭಾಗೀಯ ರೈಲ್ವೇ ಮ್ಯಾನೇಜರ್ ಚಿತ್ರವೊಂದರ ಜೊತೆಗೆ ಟ್ವೀಟ್ ಮಾಡಿದ್ದು, ನೆಟ್ಟಿಗರು ಇದನ್ನು ಕಂಡು ಶ್ಲಾಘನೆಗಳನ್ನು ಸೂಚಿಸಿದ್ದಾರೆ. ಈ ರೈಲು ಬೆಂಗಳೂರಿನಿಂದ ಗೋರಖ್ಪುರದತ್ತ ಹೊರಟಿತ್ತು.