ಓದಿದ್ದು ಇಂಜಿನಿಯರಿಂಗ್ ಆದರೂ ಕಿರುತೆರೆ ಮೂಲಕ ಚಲನಚಿತ್ರ ರಂಗಕ್ಕೆ ಕಾಲಿಟ್ಟು ಯಶಸ್ಸಿನ ಮೆಟ್ಟಿಲು ಹತ್ತತೊಡಗುವ ಸಂದರ್ಭದಲ್ಲಿಯೇ ಸಾವಿನ ಕದ ತಟ್ಟಿರುವ ಉದಯೋನ್ಮುಖ ನಟ ಸುಶಾಂತ್ ಸಿಂಗ್, ಗಗನಯಾತ್ರಿಯಾಗುವ ಮೂಲಕ ಬಾಹ್ಯಾಕಾಶಯಾನ ಮಾಡುವ ಕನಸನ್ನು ಹೊತ್ತಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಸುಶಾಂತ್ ಸಿನಿಪ್ರಯಾಣದ ಜೊತೆ ಜೊತೆಗೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನ ಪಟ್ಟಿದ್ದರು. ಇನ್ನು ಆಫ್ ಸ್ಕ್ರೀನ್ ವೇಳೆ ಇರುತ್ತಿದ್ದ ಸಮಯದಲ್ಲಿ ಮೇಡ್ ಟೆಲಿಸ್ಕೋಪ್ ಮೂಲಕ ಆಕಾಶದತ್ತ ವೀಕ್ಷಣೆ ಮಾಡುತ್ತಿದ್ದರು. ಆಕಾಶ ಸ್ವಚ್ಛಂದವಾಗಿದ್ದಾಗ ಶನಿ, ಗುರು, ಚಂದ್ರ ಗ್ರಹಗಳನ್ನು ನೋಡುತ್ತಿದ್ದರು. ಇದರ ಜೊತೆಗೆ ಆ್ಯಂಡ್ರೋಮೇಡ್ ಗೆಲಾಕ್ಸಿಯನ್ನು ವೀಕ್ಷಿಸುತ್ತಿದ್ದರು ಎನ್ನಲಾಗಿದೆ.
ನನಗೆ ಗಗನಯಾತ್ರಿ ಆಗಬೇಕೆಂದು ಕನಸು ಇತ್ತು. ಬಳಿಕ ನನ್ನಲ್ಲಿ ನಾನು ಪೈಲೆಟ್ ಆಗಬೇಕೆಂದು ಅಂದುಕೊಂಡೆ. ಕೊನೆಗೆ ಇಂಜಿನಿಯರ್ ಆಗಬೇಕು ಎಂದು ನಿರ್ಧರಿಸಿದೆ. ಆಗ ಗೊಂದಲಕ್ಕೆ ಬಿದ್ದಿದ್ದರಿಂದ ಮೊದಲು ನಟನಾಗುತ್ತೇನೆ. ಆಮೇಲೆ ಇವೆಲ್ಲವನ್ನೂ ಪಡೆಯುತ್ತೇನೆ ಎಂದು ಇತ್ತೀಚಿಗಿನ ಸಂದರ್ಶನದಲ್ಲೂ ತಮ್ಮ ಮನದಾಸೆ ವ್ಯಕ್ತಪಡಿಸಿದ್ದರು.