alex Certify ಬಲೆಗೆ ಸಿಲುಕಿ ಪರಿತಪಿಸುತ್ತಿದ್ದ ಲಂಗೂರ್ ರಕ್ಷಿಸಿದ ರೈತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲೆಗೆ ಸಿಲುಕಿ ಪರಿತಪಿಸುತ್ತಿದ್ದ ಲಂಗೂರ್ ರಕ್ಷಿಸಿದ ರೈತರು

ಬಲೆಯೊಂದರಲ್ಲಿ ಸಿಲುಕಿದ್ದ ಲಂಗೂರ್‌ ಮಂಗವೊಂದರ ಮರಿಯನ್ನು ರೈತರು ರಕ್ಷಿಸಿದ ವಿಡಿಯೋವೊಂದು ವೈರಲ್ ಆಗಿದೆ.

ಬಲೆಯನ್ನು ನಾಜೂಕಾಗಿ ಕಡಿದು, ಮರಿಯನ್ನು ಬಹಳ ಜತನದಿಂದ ಹೊರ ತೆಗೆಯಲು ರೈತರು ಮುಂದಾದ ವೇಳೆ ಆ ಮರಿಯ ತಾಯಿ ಹಾಗೂ ಬಳಗದ ಸದಸ್ಯರು ಅಷ್ಟು ದೂರದಲ್ಲಿ ಕುಳಿತು, ಇದನ್ನು ವೀಕ್ಷಿಸುತ್ತಿದ್ದು, ಬಳಿಕ ಆ ಮರಿಯನ್ನು ತೆಗೆದುಕೊಂಡು ಅದರ ತಾಯಿಯ ಬಳಿ ಬಿಟ್ಟಿದ್ದಾರೆ ರೈತರು.

ಇದೇ ಖುಷಿಯಲ್ಲಿ ಒಂದನ್ನೊಂದು ತಬ್ಬಿಕೊಂಡ ತಾಯಿ-ಮರಿ ಇಬ್ಬರೂ ಅಲ್ಲಿಂದ ಓಡಿಹೋಗಿವೆ. ಮೂಕ ಪ್ರಾಣಿಗಳ ನೆರವಿಗೆ ಬಂದ ರೈತರನ್ನು ಹೀರೋಗಳು ಎಂದು ಶ್ಲಾಘಿಸಿದ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಧಾ ರಮೆನ್ ಈ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

https://twitter.com/SudhaRamenIFS/status/1270951247944663040?ref_src=twsrc%5Etfw%7Ctwcamp%5Etweetembed%7Ctwterm%5E1270951247944663040&ref_url=https%3A%2F%2Fwww.timesnownews.com%2Fthe-buzz%2Farticle%2Fbaby-langur-trapped-in-net-rescued-by-farmers-reunites-with-mother-in-heartwarming-video-watch%2F605857

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...