ಲಾಕ್‌ಡೌನ್ ಮಧ್ಯೆ ಬಡವರಿಗೆ ಪಡಿತರ ಮತ್ತು ಆರ್ಥಿಕ ನೆರವು ನೀಡುವ ಯೋಜನೆ ಜಾರಿಯಲ್ಲಿದೆ. ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ ಪಿಎಂಜೆಡಿವೈನ ಮಹಿಳಾ ಖಾತೆದಾರರಿಗೆ ಜೂನ್ ತಿಂಗಳಲ್ಲಿ 500 ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ಹಾಕಲಾಗ್ತಿದೆ. ಭಾರತೀಯ ಬ್ಯಾಂಕ್ಸ್ ಅಸೋಸಿಯೇಷನ್ ಈ ಮಾಹಿತಿಯನ್ನು ಟ್ವೀಟ್ ಮಾಡಿದೆ.
ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಖಾತೆದಾರರಿಗೆ ಬ್ಯಾಂಕ್ಸ್ ಅಸೋಸಿಯೇಷನ್ ತಿಳಿಸಿದೆ. ಬ್ಯಾಂಕುಗಳಲ್ಲಿನ ದಟ್ಟಣೆಯನ್ನು ತಪ್ಪಿಸಲು ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅದ್ರಂತೆ ಬ್ಯಾಂಕ್ ಗೆ ಬಂದು ಜನರು ಹಣ ಪಡೆಯಬಹುದು.
5 ಜೂನ್ ರಂದು ಖಾತೆಯ ಕೊನೆಯ ಸಂಖ್ಯೆ 0 ಅಥವಾ 1 ಆಗಿದ್ದವರ ಖಾತೆಗೆ ಹಣ ಹೋಗಲಿದೆ. ಜೂನ್ 6ರಂದು ಖಾತೆ ಕೊನೆಯ ಸಂಖ್ಯೆ 2 ಮತ್ತು 3 ಆಗಿದ್ದವರಿಗೆ, ಜೂನ್ 8 ರಂದು ಕೊನೆಯ ಸಂಖ್ಯೆ 4 ಅಥವಾ 5 ಆಗಿದ್ದವರಿಗೆ, ಜೂನ್ 9ರಂದು ಕೊನೆಯ ಸಂಖ್ಯೆ 6 ಅಥವಾ 7 ಆಗಿದ್ದವರಿಗೆ ಮತ್ತು ಜೂನ್ 10ರಂದು ಕೊನೆಯ ಸಂಖ್ಯೆ 8 ಅಥವಾ 9 ಆಗಿದ್ದವರ ಖಾತೆಗೆ ಹಣ ಹೋಗಲಿದೆ. ಇದ್ರ ಆಧಾರದ ಮೇಲೆ ಆಯಾ ಖಾತೆದಾರರು ಬ್ಯಾಂಕ್ ಗೆ ಬಂದು ಹಣ ಪಡೆಯಬಹುದಾಗಿದೆ.