ಇದೊಂಥರಾ ಅಚ್ಚರಿ ಸುದ್ದಿಯೇ ಸರಿ. ಶಿಕ್ಷಕಿಯೊಬ್ಬಳು ಕಿಡ್ನಿಯಲ್ಲಿ ಕಲ್ಲು ಇದೆ ಎಂದು ಭಾವಿಸಿ ಆಸ್ಪತ್ರೆಗೆ ಭೇಟಿ ನೀಡಿ, ಮಗುವಿಗೆ ಜನ್ಮ ನೀಡಿದ್ದಾಳೆ.
ಅಂದರೆ ತಾನು ಗರ್ಭಿಣಿ ಎಂದು ಆಕೆಗೆ ಅರಿವೇ ಇರಲಿಲ್ಲವಂತೆ, ಈ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇಲಿನಾಯ್ಸ್ ನ 23 ವರ್ಷದ ಲಿಜ್ಜೀ ಕ್ವಾ ಹೇಳುವ ಪ್ರಕಾರ, ಮಧ್ಯರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಕಿಡ್ನಿಯಲ್ಲಿ ಕಲ್ಲು ಇದೆ ಎಂದು ಭಾವಿಸಿ ಆಸ್ಪತ್ರೆಗೆ ಹೋದ ಬಳಿಕವಷ್ಟೇ ತಾನು ಗರ್ಭಿಣಿ ಎಂದು ಅರಿವಾಗಿದೆ.
ಈ ಮಗುವಿಗೆ ಈಗ ಹನ್ನೊಂದು ತಿಂಗಳು ಕಳೆದಿದ್ದು, ಅದರೊಂದಿಗೆ ಸಂತೋಷವಾಗಿದ್ದೇನೆ ಎಂದು ವಿಡಿಯೋದಲ್ಲಿ ಶಿಕ್ಷಕಿ ಹೇಳಿಕೊಂಡಿದ್ದಾರೆ.
ಈ ಅಚ್ಚರಿಯನ್ನು ವೀಕ್ಷಿಸಿದ ನೆಟ್ಟಿಗರು ಆಕೆಗೆ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.