ಬೀಜಿಂಗ್: ಅಪಾಯಕ್ಕೆ ಸಿಲುಕಿದ್ದ ಚಿಕ್ಕ ಬಾಲಕನನ್ನು ಡೆಲಿವರಿ ಬಾಯ್ ಒಬ್ಬ ಎರಡನೇ ಮಹಡಿ ಏರಿ ಸಾಹಸದಿಂದ ರಕ್ಷಣೆ ಮಾಡಿದ ಘಟನೆ ಚೀನಾದಲ್ಲಿ ಕಳೆದ ವಾರ ನಡೆದಿದೆ.
ಗುಂಗಝೌ ಪ್ರದೇಶದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಲಕನೊಬ್ಬನ ದೇಹ ಎರಡನೇ ಮಹಡಿಯ ಕಿಟಕಿಯಿಂದ ಹೊರಬಿದ್ದಿತ್ತು. ತಲೆ ಮಾತ್ರ ಸರಳುಗಳ ನಡುವೆ ಸಿಕ್ಕಿ ಆತ ನೇತಾಡುತ್ತಿದ್ದ. ಮನೆಯೊಳಗಿಂದ ಪಾಲಕರು ಆತನನ್ನು ರಕ್ಷಿಸಲು ಪ್ರಯತ್ನ ನಡೆಸುತ್ತಿದ್ದರು.
ಅದನ್ನು ಗಮನಿಸಿದ ಸ್ಥಳೀಯ ಡೆಲಿವರಿ ಬಾಯ್ ಲಿ ಜಿಯಾಜುನ್ ಎರಡು ಮಹಡಿಗಳನ್ನು ಯಾವುದೆ ರಕ್ಷಣಾ ಸಲಕರಣೆಗಳಿಲ್ಲದೆ ಸರಸರನೆ ಏರಿ ಬಾಲಕನನ್ನು ಸರಳುಗಳ ನಡುವಿನಿಂದ ರಕ್ಷಿಸಿ ಸುರಕ್ಷಿತವಾಗಿ ಕರೆತಂದಿದ್ದಾರೆ.
ಮಗು ಯಾವುದೇ ಗಾಯವಿಲ್ಲದೇ ಪಾರಾಗಿದ್ದು, ಜಿಯಾಜುನ್ ಈಗ ಚೀನಾದ ಸುಪರ್ ಮ್ಯಾನ್ ಆಗಿ ಪ್ರಸಿದ್ಧಿ ಹೊಂದಿದ್ದಾರೆ.