ಕೊಲಂಬೋ: ಹೆರಾಯಿನ್ ಡ್ರಗ್ ಹೊಂದಿದ್ದ ಆರೋಪದಲ್ಲಿ ಶ್ರೀಲಂಕಾ ಸ್ಟಾರ್ ಕ್ರಿಕೆಟರ್ ಶೆಹನ್ ಮದುಶಂಕಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ಗಮನ ಸೆಳೆದಿದ್ದ ಶೆಹನ್ ಮದುಶಂಕಾ ಶ್ರೀಲಂಕಾದ ಪನ್ನಾಲ ನಗರದಲ್ಲಿ ಮೇ 24 ರಂದು ಇಬ್ಬರು ಪರಿಚಿತರೊಂದಿಗೆ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ವಾಹನ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 2.5 ಗ್ರಾಂ ಹೆರಾಯಿನ್ ಪತ್ತೆಯಾಗಿದೆ.
ಕೊರೊನಾ ಸೋಂಕು ತಡೆಯಲು ಭಾನುವಾರ ಕರ್ಫ್ಯೂ ಜಾರಿಯಲ್ಲಿದ್ದು ಇಂತಹ ಸಂದರ್ಭದಲ್ಲಿ ಹೆರಾಯಿನ್ ಸಮೇತ ಸಿಕ್ಕಿಬಿದ್ದ ಮದುಶಂಕಾ ಅವರನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, 2 ವಾರ ಪೊಲೀಸ್ ವಶಕ್ಕೆ ವಹಿಸಲಾಗಿದೆ.