ಎಚ್.ಡಿ.ಎಫ್.ಸಿ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಫ್ಲಿಪ್ಕಾರ್ಟ್ನಲ್ಲಿ ಶಾಪಿಂಗ್ ಮಾಡುವ ಮೂಲಕ 2 ಸಾವಿರ ರೂಪಾಯಿಗಳನ್ನು ಉಳಿಸಬಹುದು. ಈ ಬಗ್ಗೆ ಬ್ಯಾಂಕ್ ತನ್ನ ವೆಬ್ಸೈಟ್ನಲ್ಲಿ ಮಾಹಿತಿ ನೀಡಿದೆ.
ಗ್ರಾಹಕರು ಫ್ಲಿಪ್ ಕಾರ್ಟ್ನಲ್ಲಿ ಶಾಪಿಂಗ್ ಮಾಡುವಾಗ ಎಚ್ಡಿಎಫ್ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದ್ರೆ 2 ಸಾವಿರ ರೂಪಾಯಿ ಉಳಿಸಬಹುದು. ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇಎಂಐ ವಹಿವಾಟಿನ ಮೇಲೆ ತ್ವರಿತ ಶೇಕಡಾ 10 ರಷ್ಟು ರಿಯಾಯಿತಿ ನೀಡುತ್ತಿದೆ. ಎಚ್ಡಿಎಫ್ಸಿ ಡೆಬಿಟ್ ಕಾರ್ಡ್ ವಹಿವಾಟಿನಲ್ಲಿ ಫ್ಲಾಟ್ 500 ರೂಪಾಯಿಗಳನ್ನು ಉಳಿಸಬಹುದು. ಈ ಕೊಡುಗೆ ಮೇ 27 ರವರೆಗೆ ಮಾತ್ರ ಲಭ್ಯ.
ಎಚ್ಡಿಎಫ್ಸಿಯ ಈ ಪ್ರಸ್ತಾಪದಡಿಯಲ್ಲಿ ಶೇಕಡಾ 10 ರಷ್ಟು ರಿಯಾಯಿತಿಯ ಲಾಭ ಪಡೆಯಲು ಕನಿಷ್ಠ ಕಾರ್ಟ್ ಮೌಲ್ಯವು 5 ಸಾವಿರ ರೂಪಾಯಿಗಳಾಗಿರಬೇಕು. ಗರಿಷ್ಠ 2 ಸಾವಿರ ರೂಪಾಯಿ ರಿಯಾಯಿತಿ ಪಡೆಯಬಹುದು. ಎಚ್ಡಿಎಫ್ಸಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಾಗಿ 20 ಸಾವಿರ ರೂಪಾಯಿ ಶಾಪಿಂಗ್ ಮಾಡಿದರೆ 2 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ.
ಫ್ರಿಡ್ಜ್ ಗಳು, ಹವಾನಿಯಂತ್ರಣಗಳು, ಕೂಲರ್ಗಳು, ಗೀಸರ್ಗಳು, ರೂಮ್ ಹೀಟರ್ಗಳು ಮತ್ತು ಫ್ಯಾನ್ಗಳ ಖರೀದಿಗೆ ಈ ಕೊಡುಗೆ ಸಿಗಲಿದೆ.