alex Certify ಇಲ್ಲಿದೆ ಅಗ್ಗದ ಬೆಲೆಗೆ AC – ಫ್ರಿಡ್ಜ್ ಖರೀದಿಸುವ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಅಗ್ಗದ ಬೆಲೆಗೆ AC – ಫ್ರಿಡ್ಜ್ ಖರೀದಿಸುವ ಅವಕಾಶ

ಎಚ್.ಡಿ.ಎಫ್.ಸಿ. ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ 2 ಸಾವಿರ ರೂಪಾಯಿಗಳನ್ನು ಉಳಿಸಬಹುದು. ಈ ಬಗ್ಗೆ  ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.

ಗ್ರಾಹಕರು ಫ್ಲಿಪ್ ‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುವಾಗ ಎಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದ್ರೆ 2 ಸಾವಿರ ರೂಪಾಯಿ ಉಳಿಸಬಹುದು. ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇಎಂಐ ವಹಿವಾಟಿನ ಮೇಲೆ ತ್ವರಿತ ಶೇಕಡಾ 10 ರಷ್ಟು ರಿಯಾಯಿತಿ ನೀಡುತ್ತಿದೆ. ಎಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್ ವಹಿವಾಟಿನಲ್ಲಿ ಫ್ಲಾಟ್ 500 ರೂಪಾಯಿಗಳನ್ನು ಉಳಿಸಬಹುದು. ಈ ಕೊಡುಗೆ ಮೇ 27 ರವರೆಗೆ ಮಾತ್ರ ಲಭ್ಯ.

ಎಚ್‌ಡಿಎಫ್‌ಸಿಯ ಈ ಪ್ರಸ್ತಾಪದಡಿಯಲ್ಲಿ  ಶೇಕಡಾ 10 ರಷ್ಟು ರಿಯಾಯಿತಿಯ ಲಾಭ ಪಡೆಯಲು ಕನಿಷ್ಠ ಕಾರ್ಟ್ ಮೌಲ್ಯವು 5 ಸಾವಿರ ರೂಪಾಯಿಗಳಾಗಿರಬೇಕು. ಗರಿಷ್ಠ 2 ಸಾವಿರ ರೂಪಾಯಿ ರಿಯಾಯಿತಿ ಪಡೆಯಬಹುದು. ಎಚ್‌ಡಿಎಫ್‌ಸಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ 20 ಸಾವಿರ ರೂಪಾಯಿ ಶಾಪಿಂಗ್ ಮಾಡಿದರೆ  2 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ.

ಫ್ರಿಡ್ಜ್ ಗಳು, ಹವಾನಿಯಂತ್ರಣಗಳು, ಕೂಲರ್‌ಗಳು, ಗೀಸರ್‌ಗಳು, ರೂಮ್ ಹೀಟರ್‌ಗಳು ಮತ್ತು ಫ್ಯಾನ್‌ಗಳ ಖರೀದಿಗೆ ಈ ಕೊಡುಗೆ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...