ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎಚ್ ಡಿ ಎಫ್ ಸಿ ತನ್ನ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ಬ್ಯಾಂಕ್, ಲಾಕ್ ಡೌನ್ ಸಂದರ್ಭದಲ್ಲಿ ಬಡ್ಡಿ ದರದಲ್ಲಿ ಇಳಿಕೆ ಮಾಡಿದೆ. ಇದ್ರಿಂದ ಗ್ರಾಹಕರಿಗೆ ನೆಮ್ಮದಿ ಸಿಕ್ಕಂತಾಗಿದೆ.
ಎಚ್ ಡಿ ಎಫ್ ಸಿ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡಾ 0.55ರಷ್ಟು ಕಡಿಮೆ ಮಾಡಿದ್ದು ಈಗ ಬಡ್ಡಿ ದರ ಶೇಕಡಾ 8.10ರಷ್ಟಾಗಿದೆ.
ಮೂಲ ದರವನ್ನು ಆಧರಿಸಿದ ಎಲ್ಲಾ ಸಾಲಗಳ ಇಎಂಐ ಶೇಕಡಾ 0.55 ರಷ್ಟು ಕಡಿಮೆಯಾಗಿದೆ. 1 ಜುಲೈ 2010 ರ ನಂತರ ತೆಗೆದುಕೊಂಡ ಎಲ್ಲಾ ಗೃಹ ಸಾಲಗಳು ಮೂಲ ದರವನ್ನು ಆಧರಿಸಿವೆ. ಪ್ರತಿ ದಿನ ನೀವು ಪಾವತಿಸುವ ಬಡ್ಡಿಯಲ್ಲಿ ಮೂಲ ದರವೂ ಸೇರಿರುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು ಶೇಕಡಾ 0.40 ರಷ್ಟು ಕಡಿತಗೊಳಿಸಿದೆ. ರೆಪೊ ದರವು ಈಗ ಶೇಕಡಾ 4.40ರ ಬದಲು ಶೇಕಡಾ 4 ರಷ್ಟಾಗಿದೆ. ಹಿಂದಿನ ಮಾರ್ಚ್ನಲ್ಲೂ ರೆಪೊ ದರವನ್ನು ಶೇಕಡಾ 0.75 ರಷ್ಟು ಕಡಿತಗೊಳಿಸಲಾಗಿತ್ತು.