ಚಿಕನ್ ಪ್ರಿಯರಿಗೆ ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಚಿಕನ್ ಚಾಪ್ಸ್ ಮಾಡುವ ವಿಧಾನ ಇದೆ. ಒಮ್ಮೆ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿದು ನೋಡಿ.
ಬೇಕಾಗುವ ಸಾಂಗ್ರಿಗಳು;
ಈರುಳ್ಳಿ-1 ಸಣ್ಣಗೆ ಕತ್ತರಿಸಿದ್ದು, ಹಸಿಮೆಣಸು-5, ಬೆಳ್ಳುಳ್ಳಿ-8 ಎಸಳು, ಕೊತ್ತಂಬರಿ ಸ್ವಲ್ಪ, ಪುದೀನಾ ಸ್ವಲ್ಪ, 15 ಕಾಳು-ಕಾಳು ಮೆಣಸು, ಲವಂಗ-8, ಏಲ್ಕಕಿ-1, ಚಕ್ಕೆ-ಸಣ್ಣ ಪೀಸ್, ಶುಂಠಿ-1/2 ಇಂಚು, ಚಿಕನ್-1/2 ಕೆಜಿ, ಧನಿಯಾ-1 ಚಮಚ, ಎಣ್ಣೆ-ಸ್ವಲ್ಪ, ಅರ್ಧ ಕಪ್- ತೆಂಗಿನಕಾಯಿ ರುಬ್ಬಿಕೊಂಡಿದ್ದು, ಸ್ವಲ್ಪ ಅರಿಶಿನ , ನೀರು.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ಈರುಳ್ಳಿ ಸೇರಿಸಿ ಕೈಯಾಡಿಸಿ ನಂತರ ಶುಂಠಿ ಬೆಳ್ಳುಳ್ಳಿ, ಹಸಿಮೆಣಸು ಸೇರಿಸಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ. ಆಮೇಲೆ ಚಕ್ಕೆ, ಲವಂಗ, ಏಲಕ್ಕಿ, ಮೆಣಸು, ಪುದೀನಾ, ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದು ಸ್ವಲ್ಪ ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಅದಕ್ಕೆ ಸ್ವಲ್ಪ ಅರಿಶಿನ, ಧನಿಯಾ ಪುಡಿ ಸೇರಿಸಿ ರುಬ್ಬಿಕೊಳ್ಳಿ.
ನಂತರ ಕುಕ್ಕರ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಎಣ್ಣೆ ಸೇರಿಸಿ ಅದು ಬಿಸಿಯಾಗುತ್ತಲೆ ಈರುಳ್ಳಿ ಹಾಕಿ. ಈರುಳ್ಳಿ ಕೆಂಪಗಾದ ಮೇಲೆ ಚಿಕನ್ ಸೇರಿಸಿ ಸ್ವಲ್ಪ ಹುರಿದುಕೊಳ್ಳಿ. ಇದಕ್ಕೆ ಚಿಟಿಕೆ ಅರಿಶಿನ ಕೂಡ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಎಣ್ಣೆಯಲ್ಲಿಯೇ ಚಿಕನ್ ಬೇಯಲಿ. ನಂತರ ರುಬ್ಬಿಕೊಂಡ ಮಸಾಲೆ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಆಮೇಲೆ ಸ್ವಲ್ಪ ನೀರು ಸೇರಿಸಿ ಬೇಯಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ನೀರು ಸೇರಿಸಿ ಕುಕ್ಕರ್ ಮುಚ್ಚಿ ವಿಷಲ್ ಕೂಗಿಸಿಕೊಳ್ಳಿ. ಕುಕ್ಕರ್ ತಣ್ಣಗಾದ ಮೇಲೆ ತೆಂಗಿನಕಾಯಿ ಪೇಸ್ಟ್ ಹಾಕಿ 10 ನಿಮಿಷಗಳ ಕಾಲ ಕುದಿಸಿಕೊಳ್ಳಿ.