ಪಾಲಕ್ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭವಿದೆ. ಇದರಲ್ಲಿನ ಪೋಷಕಾಂಶಗಳು ದೇಹಕ್ಕೆ ಒಳ್ಳೆಯದು. ರುಚಿಕರವಾದ ಪಾಲಕ್ ಕೂಟು ಮಾಡುವ ವಿಧಾನ ಇಲ್ಲಿದೆ. ನೀವು ಟ್ರೈ ಮಾಡಿ ನೋಡಿ.
½ ಕಪ್ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನೆನೆಸಿಡಿ. ನಂತರ ಇದನ್ನು ಒಂದು ಕುಕ್ಕರ್ ಗೆ ಹಾಕಿ 2 ಕಪ್ ನೀರು ಸೇರಿಸಿ ¼ ಟೀ ಸ್ಪೂನ್ ಅರಿಶಿನ 1 ಚಮಚ ಎಣ್ಣೆ ಸೇರಿಸಿ 3 ವಿಷಲ್ ಕೂಗಿಸಿಕೊಳ್ಳಿ. ನಂತರ ಒಂದು ಮಿಕ್ಸಿ ಜಾರಿಗೆ ¼ ಕಪ್ ನಷ್ಟು ತೆಂಗಿನಕಾಯಿ ತುರಿ, 1 ಟೇಬಲ್ ಸ್ಪೂನ್ ಜೀರಿಗೆ, ½ ಟೀ ಸ್ಪೂನ್ ಕಾಳುಮೆಣಸು, 3 ಒಣಮೆಣಸು ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ.
‘ರಂಗೀಲಾ’ ಚಿತ್ರದ ದೊಡ್ಡ ಗುಟ್ಟನ್ನು ಬಿಚ್ಚಿಟ್ಟ ಊರ್ಮಿಳಾ
ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಚೆನ್ನಾಗಿ ತೊಳೆದು ಕತ್ತರಿಸಿಕೊಂಡ ಪಾಲಕ್ ಎಲೆ 2 ಕಪ್ ಹಾಕಿ ಸ್ವಲ್ಪ ಅರಿಶಿನ, 3 ಎಸಳು ಜಜ್ಜಿದ ಬೆಳ್ಳುಳ್ಳಿ ಹಾಕಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ 2 ಕಪ್ ನೀರು ಸೇರಿಸಿ ಬೇಯಿಸಿಕೊಳ್ಳಿ. ಇದಕ್ಕೆ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ 5 ನಿಮಿಷಗಳ ಕಾಲ ಬೇಯಿಸಿ ತದನಂತರ ಬೇಯಿಸಿಟ್ಟುಕೊಂಡ ಹೆಸರುಬೇಳೆ ಸೇರಿಸಿ ಕುದಿಸಿ. ನೀರು ಬೇಕಿದ್ದರೆ ಸೇರಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ.