ಛತ್ತೀಸ್ಗಢದ ಕೊರ್ಬಾ ಜಿಲ್ಲೆಯ ವ್ಯಕ್ತಿಯೊಬ್ಬನಿಗೆ ವಾಟ್ಸಾಪ್ ಗ್ರೂಪ್ ನಲ್ಲಿ ಅಶ್ಲೀಲ ಫೋಟೋ ಹಾಕಿರುವುದು ದುಬಾರಿಯಾಗಿ ಪರಿಣಮಿಸಿದೆ. ಸ್ಥಳೀಯ ಮಹಿಳೆಯರ ವಾಟ್ಸಾಪ್ ಗ್ರೂಪ್ ನಲ್ಲಿ ವ್ಯಕ್ತಿ ಪತ್ನಿ ಕೂಡ ಇದ್ದಾಳೆ. ಈ ಗ್ರೂಪ್ ಗೆ ಕುಡಿದ ಮತ್ತಿನಲ್ಲಿ ಅಶ್ಲೀಲ ಫೋಟೋ ಹಾಕಿದ್ದಾನೆ ವ್ಯಕ್ತಿ.
ಇದನ್ನು ನೋಡಿ ಕೋಪಗೊಂಡ ಮಹಿಳೆಯರು ಪೊಲೀಸರಿಗೆ ದೂರು ನೀಡಿದ್ದಾರೆ. ನಶೆ ಇಳಿಯುತ್ತಿದ್ದಂತೆ ವ್ಯಕ್ತಿಗೆ ತನ್ನ ತಪ್ಪಿನ ಅರಿವಾಗಿದೆ. ಮಾತುಕತೆ, ಚರ್ಚೆಗಾಗಿ ಸ್ಥಳೀಯ ಮಹಿಳೆಯರು ವಾಟ್ಸಾಪ್ ಗ್ರೂಪ್ ಮಾಡಿದ್ದರು. ಅದ್ರಲ್ಲಿ ಗಂಡಂದಿರನ್ನು ಸೇರಿಸಿದ್ದರು.
ಕುಡಿದ ವ್ಯಕ್ತಿ ತನ್ನ ಖಾಸಗಿ ಅಂಗದ ಫೋಟೋ ತೆಗೆದು ಅದನ್ನು ವಾಟ್ಸಾಪ್ ಗೆ ಹಾಕಿದ್ದಾನೆ. ಇದನ್ನು ನೋಡಿದ ಪತ್ನಿ ಮೊದಲು ಪತಿ ಮುಂದೆ ಗಲಾಟೆ ಮಾಡಿದ್ದಾಳೆ. ನಂತ್ರ ಗ್ರೂಪ್ ನ ಉಳಿದ ಸದಸ್ಯರ ಜೊತೆ ಮಾತನಾಡಿ ಪತಿಯನ್ನು ಜೈಲಿಗೆ ಕಳುಹಿಸಿದ್ದಾಳೆ.