ತಿಹಾರ್ ಜೈಲಿನಲ್ಲಿ ಅತ್ಯಾಚಾರದ ಆರೋಪಿಗಳನ್ನು ಪ್ರತ್ಯೇಕಿಸಲಾಗಿದೆ. ಆರೋಪಿಗೆ ಕೊರೊನಾ ಪರೀಕ್ಷೆಯನ್ನೂ ನಡೆಸಲಾಗಿದೆ. ಆರೋಪಿ ಅತ್ಯಾಚಾರ ಎಸಗಿದ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಇದು ಗೊತ್ತಾಗ್ತಿದ್ದಂತೆ ಜೈಲಿನಲ್ಲಿ ಗೊಂದಲದ ವಾತಾವರಣ ಮನೆ ಮಾಡಿತ್ತು.
ಈ ಆರೋಪಿ ಜೊತೆಯಲ್ಲಿದ್ದ ಇತರ ಇಬ್ಬರು ಆರೋಪಿಗಳನ್ನು ಬೇರ್ಪಡಿಸಲಾಗಿದೆ. ಈ ಪ್ರಕರಣ ಜೈಲು ಸಂಖ್ಯೆ -2 ರಲ್ಲಿ ನಡೆದಿದೆ. ಆರೋಪಿಯನ್ನು 14 ದಿನಗಳ ಕಾಲ ಪ್ರತ್ಯೇಕವಾಗಿಡಲು ಜೈಲಧಿಕಾರಿಗಳು ನಿರ್ಧರಿಸಿದ್ದಾರೆ. ಜೈಲು ಸಂಖ್ಯೆ ಎರಡರಲ್ಲಿ ಛೋಟಾ ರಾಜನ್ ಸೇರಿ ಅನೇಕ ಕೈದಿಗಳಿದ್ದಾರೆ. ಆದ್ರೆ ಅವರ್ಯಾರೂ ಈತನ ಸಂಪರ್ಕಕ್ಕೆ ಬಂದಿಲ್ಲ.
ಈ ಮಧ್ಯೆ ತಿಹಾರ್ ಜೈಲಿನಲ್ಲಿರುವ 54 ವಿದೇಶಿ ಮಹಿಳಾ ಕೈದಿಗಳು ಪೆರೋಲ್ ಷರತ್ತುಗಳನ್ನು ಸರಾಗಗೊಳಿಸುವಂತೆ ಒತ್ತಾಯಿಸಿದ್ದಾರೆ. ಕೊರೊನಾ ವೈರಸ್ ದೃಷ್ಟಿಯಿಂದ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.