ಎಟಿಎಂನಲ್ಲಿದ್ದ ಫಲಕಗಳು, ಕೆಲ ಭಾಗಗಳು ಹಾನಿಯಾಗಿದ್ದವು. ಹೀಗಾಗಿ ಲಾಕ್ ಡೌನ್ ಸಮಯ ನೋಡಿಕೊಂಡು ಯಾರೊ ಕಳ್ಳರು ಈ ಕೆಲಸ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಹಾಗಾಗಿಯೇ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಆದರೆ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ಕಂಡು ಶಾಕ್ ಆಗಿದ್ದಾರೆ.
ಹೌದು, ಈ ಘಟನೆ ನಡೆದಿರುವುದು ದೆಹಲಿಯ ಸೌತ್ ಅವೆನ್ಯೂ ಪ್ರದೇಶದಲ್ಲಿ. ಅಲ್ಲಿನ ಎಸ್.ಬಿ.ಐ. ಬ್ಯಾಂಕ್ ಎಟಿಎಂ ನಲ್ಲಿ ಕೋತಿಯೊಂದು ಮಾಡಿದ ಅವಾಂತರ ಇಷ್ಟಕ್ಕೆಲ್ಲಾ ಕಾರಣವಾಗಿದೆ. ಎಟಿಎಂ ಒಳಗೆ ಬಂದ ಕೋತಿ ಹೊರಗೆ ಹೋಗಲು ಆಗದೆ ಒದ್ದಾಡಿದೆ. ಈ ವೇಳೆ ಸುಮ್ಮನೆ ಇರಲಾರದೆ ಎಟಿಎಂ ಕೆಲ ಭಾಗಗಳು, ನಾಮಫಲಕಗಳನ್ನು ಕಿತ್ತು ಹಾಕಿದೆ.
ಇನ್ನು ಕೋತಿಯ ಈ ವಿಡಿಯೊ ಸಕ್ಕತ್ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ನೋಡಿದ ನೆಟ್ಟಿಗರು ಫುಲ್ ಎಂಜಾಯ್ ಮಾಡಿದ್ದಾರೆ. ತರಹೇವಾರಿ ಕಮೆಂಟ್ ಗಳನ್ನು ಮಾಡುವ ಮೂಲಕ ಲಾಕ್ ಡೌನ್ ಸಮಯದಲ್ಲಿ ಎಂಜಾಯ್ ಮಾಡಿದ್ದಾರೆ.