ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಯಲ್ಲಿದೆ. ಇದ್ರಿಂದ ಶಾಲಾ-ಕಾಲೇಜುಗಳ ಬಾಗಿಲು ಮುಚ್ಚಿದೆ. ಕೆಲ ಶಾಲಾ-ಕಾಲೇಜುಗಳಲ್ಲಿ ಆನ್ಲೈನ್ ವಿದ್ಯಾಭ್ಯಾಸ ಶುರುವಾಗಿದೆ. ಆನ್ಲೈನ್ ಮೂಲಕ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡ್ತಿದ್ದಾರೆ. ಆದ್ರೆ ಇದು ಕೆಲ ಅಪರಾಧಕ್ಕೆ ಕಾರಣವಾಗ್ತಿದೆ.
ಗಾಜಿಯಾಬಾದ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಇಲ್ಲಿನ ವಿದ್ಯಾರ್ಥಿನಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಆಕೆ ಮೊಬೈಲ್ ಗೆ ಅಶ್ಲೀಲ ವಿಡಿಯೋ, ಫೋಟೋಗಳು ಬರ್ತಿವೆ. ಕರೆ ಮಾಡುವ ವ್ಯಕ್ತಿ ನಾನು ಶಿಕ್ಷಕರ ಮಗ ಎಂದ್ರೆ ಮತ್ತೊಮ್ಮೆ ನಾನು ಶಿಕ್ಷಕರ ಸಂಬಂಧಿ ಎನ್ನುತ್ತಾನಂತೆ.
ಮನೆಯ ಬೇರೆಯವರು ಫೋನ್ ಎತ್ತಿದ್ರೆ ಅವ್ರಿಗೆ ಧಮಕಿ ಹಾಕ್ತಾನಂತೆ. ಶಿಕ್ಷಕ ಅವಿವಾಹಿತನಾಗಿದ್ದು, ಆತನ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ ಪೀಡಿತೆ ಕುಟುಂಬಸ್ಥರು.