ಮುಟ್ಟಿನ ಸಮಯದಲ್ಲಿ ಬಹುತೇಕ ಮಹಿಳೆಯರು ಹಾಗೂ ಹುಡುಗಿಯರು ಒತ್ತಡಕ್ಕೆ ಒಳಗಾಗ್ತಾರೆ. ತೀವ್ರ ಒತ್ತಡದಿಂದ ಬಳಲುವವರ ಸಂಖ್ಯೆ ಹೆಚ್ಚಿದೆ.
ಮುಟ್ಟಿನ ಸಮಯದಲ್ಲಿ ಸ್ನಾಯು ಸೆಳೆತ, ಹೊಟ್ಟೆ ನೋವು, ಕೀಲು ಮತ್ತು ಸೊಂಟದ ನೋವು ಮತ್ತು ಆಯಾಸ ಕಾಡುತ್ತದೆ. ಹಾರ್ಮೋನ್ ಗಳ ಬದಲಾವಣೆ ಇದೆಲ್ಲಕ್ಕೂ ಕಾರಣ. ಮುಟ್ಟಿನ ಸಮಯದಲ್ಲಿ ಕಾಡುವ ಒತ್ತಡವನ್ನು ನಿಯಂತ್ರಣದಲ್ಲಿಡಲು ಕೆಲ ಉಪಾಯಗಳನ್ನು ಅನುಸರಿಸಬೇಕು.
ಒತ್ತಡ ಕಡಿಮೆ ಮಾಡಿಕೊಳ್ಳಲು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಯೋಗ, ಧ್ಯಾನ ಮತ್ತು ಮಸಾಜ್ ಮಾಡಿಕೊಳ್ಳಬೇಕು.
ಮುಟ್ಟಿನ ಸಮಯದಲ್ಲಿ ಸಾಕಷ್ಟು ನಿದ್ರೆ ಬಹಳ ಮುಖ್ಯ. ಮುಟ್ಟಿನ ಸಮಯದಲ್ಲಿ ಮಾತ್ರವಲ್ಲ, ಪ್ರತಿ ದಿನವೂ ನಿದ್ರೆ ಮಾಡುವ ವೇಳೆಯನ್ನು ನಿಗದಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಮಲಗುವ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಿ. ಏಕೆಂದರೆ ಇದು ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ.
ಕಾರ್ಬೋ ಹೈಡ್ರೇಟ್ ಆಹಾರವನ್ನು ತೆಗೆದುಕೊಳ್ಳಬೇಕು. ಆಹಾರದಲ್ಲಿ ಧಾನ್ಯಗಳು ಮತ್ತು ಪಿಷ್ಟ ತರಕಾರಿಗಳನ್ನು ಸೇರಿಸಿ. ಇದು ಮುಟ್ಟಿನ ವೇಳೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಕ್ಯಾಲ್ಸಿಯಂ ಭರಿತ ಆಹಾರ ಹಾಲು ಮತ್ತು ಮೊಸರು ತೆಗೆದುಕೊಳ್ಳಿ. ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.
ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ 6ಯನ್ನು ಹೆಚ್ಚಾಗಿ ಸೇವಿಸಿ. ಇವೆರಡೂ ಒತ್ತಡ, ದೈಹಿಕ ಮತ್ತು ಮಾನಸಿಕ ಸಮಸ್ಯೆ ದೂರ ಮಾಡುತ್ತದೆ.