ಶಿವರಾತ್ರಿ ಹಬ್ಬಕ್ಕೆ ಉಪವಾಸ ವ್ರತ ಕೈಗೊಳ್ಳುವವರೇ ಹೆಚ್ಚು. ಆ ದಿನ ಉಪವಾಸ ಮುಗಿದ ನಂತರ ಏನಾದರೂ ಸೇವಿಸುತ್ತಾರೆ. ಉಪವಾಸದ ಸಮಯದಲ್ಲಿ ಆರೋಗ್ಯಕರವಾದ, ದೇಹಕ್ಕೂ ಹಿತಕರವಾದ ಸಬ್ಬಕ್ಕಿ ಪಾಯಸವನ್ನು ಮಾಡಿಕೊಂಡು ತಿನ್ನಿ. ಮಾಡುವ ವಿಧಾನದ ಕುರಿತು ಇಲ್ಲಿದೆ ಮಾಹಿತಿ.
ಬೇಕಾಗುವ ಸಾಮಾಗ್ರಿಗಳು:
4 ಕಪ್ ಹಾಲು, 2 ದೊಡ್ಡ ಚಮಚದಷ್ಟು ಸಬ್ಬಕ್ಕಿ , ¾ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, 1 ಕಪ್ ನೀರು.
ಮಾಡುವ ವಿಧಾನ:
ಮೊದಲು ಸಬ್ಬಕ್ಕಿಯನ್ನು ಚೆನ್ನಾಗಿ ತೊಳೆದು 10 ನಿಮಿಷಗಳ ಕಾಲ ನೆನೆಸಿಡಿ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿಕೊಳ್ಳಿ. ನೀರು ಬಿಸಿಯಾದ ತಕ್ಷಣ ನೆನೆಸಿಟ್ಟುಕೊಂಡ ಸಬ್ಬಕ್ಕಿಯನ್ನು ಹಾಕಿ. ಇದು ಚೆನ್ನಾಗಿ ಬೇಯಲಿ. ಬೇಕಿದ್ದರೆ ತುಸು ನೀರು ಸೇರಿಸಿಕೊಳ್ಳಿ.
ನಂತರ ಅದಕ್ಕೆ ಹಾಲನ್ನು ಸೇರಿಸಿಕೊಳ್ಳಿ. ಇದು ಚೆನ್ನಾಗಿ ಕುದಿಯಲಿ. ನಂತರ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ. ಕಡಿಮೆ ಉರಿಯಲಿ ಕುದಿಯಲಿ. ಸಬ್ಬಕ್ಕಿ ಬೆಂದಿದೆಯಾ ಎಂದು ನೋಡಿಕೊಳ್ಳಿ. ನಂತರ ಗ್ಯಾಸ್ ಆಫ್ ಮಾಡಿ. ರುಚಿಕರವಾದ ಸಬ್ಬಕ್ಕಿ ಪಾಯಸ ಸುಲಭವಾಗಿ ರೆಡಿಯಾಗುತ್ತದೆ.