ಕ್ರಿಸ್ ಮಸ್ ಹಬ್ಬ ಬಂದೇ ಬಿಟ್ಟಿದೆ ವಿಶ್ವದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಬೇರೆ ಬೇರೆಯಾಗಿ ಆಚರಿಸಲಾಗುತ್ತದೆ. ಕೆಲ ಪ್ರದೇಶದಲ್ಲಿ ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ.
ಆಸ್ಟ್ರೇಲಿಯಾ: ಕ್ರಿಸ್ಮಸ್ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ಹೆಚ್ಚು ಬಿಸಿಲಿರುತ್ತದೆ. ಹಾಗಾಗಿ ಅಲ್ಲಿನ ಜರು ನೀರಿರುವ ಪ್ರದೇಶದಲ್ಲಿ ಕ್ರಿಸ್ಮಸ್ ಆಚರಿಸಲು ಇಷ್ಟಪಡ್ತಾರೆ. ಸಾಂಟಾ ಕೂಡ ಕ್ರಿಸ್ಮಸ್ ಸಂದರ್ಭದಲ್ಲಿ ಸಮುದ್ರ ಕಿನಾರೆಯಲ್ಲಿ ಕಾಣಿಸಿಕೊಳ್ತಾನೆ.
ಆಸ್ಟ್ರಿಯಾ: ಇಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ಜನರು ಭೂತ-ಪ್ರೇತದ ವೇಷ ಧರಿಸಿ ಓಡಾಡ್ತಾರೆ. ದಾರಿಯಲ್ಲಿ ಸಿಗುವ ಮಕ್ಕಳಿಗೆ, ಹಿರಿಯರಿಗೆ ಭಯ ಹುಟ್ಟಿಸುತ್ತಾರೆ.
ಜೆಕ್ ಗಣರಾಜ್ಯ: ಕ್ರಿಸ್ಮಸ್ ಗೂ ಮುನ್ನ ಇಲ್ಲಿನ ಹುಡುಗಿಯರು ಚೆರ್ರಿ ಗಿಡವನ್ನು ಬೆಳೆಸುತ್ತಾರೆ. ಕ್ರಿಸ್ಮಸ್ ವೇಳೆಗೆ ಗಿಡದಲ್ಲಿ ಹೂ ಬಿಟ್ಟರೆ ಮುಂದಿನ ವರ್ಷ ಮದುವೆಯಾಗುತ್ತೆ ಎಂದು ಅರ್ಥೈಸಿಕೊಳ್ತಾರೆ.
ಫ್ರಾನ್ಸ್: ಇಲ್ಲಿನ ಮಕ್ಕಳು ರಾತ್ರಿ ತಮ್ಮ ಚಪ್ಪಲಿಗಳನ್ನು ಬೆಂಕಿ ಹಾಕುವ ಸ್ಥಳದಲ್ಲಿ ಇಟ್ಟು ಮಲಗ್ತಾರೆ. ರಾತ್ರಿ ಸಾಂಟಾ ಮನೆಗೆ ಬಂದು ಉಡುಗೊರೆ ನೀಡ್ತಾನೆ ಎಂಬ ನಂಬಿಕೆ ಅವ್ರದ್ದು.