alex Certify ʼಕ್ರಿಸ್ಮಸ್ʼ ನಲ್ಲಿ ಬಹಿರಂಗವಾಗುತ್ತೆ ಹುಡುಗಿಯರ ಮದುವೆ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕ್ರಿಸ್ಮಸ್ʼ ನಲ್ಲಿ ಬಹಿರಂಗವಾಗುತ್ತೆ ಹುಡುಗಿಯರ ಮದುವೆ ರಹಸ್ಯ

ಕ್ರಿಸ್ ಮಸ್ ಹಬ್ಬ ಬಂದೇ ಬಿಟ್ಟಿದೆ ವಿಶ್ವದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಬೇರೆ ಬೇರೆಯಾಗಿ ಆಚರಿಸಲಾಗುತ್ತದೆ. ಕೆಲ ಪ್ರದೇಶದಲ್ಲಿ ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ.

ಆಸ್ಟ್ರೇಲಿಯಾ: ಕ್ರಿಸ್ಮಸ್ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ಹೆಚ್ಚು ಬಿಸಿಲಿರುತ್ತದೆ. ಹಾಗಾಗಿ ಅಲ್ಲಿನ ಜರು ನೀರಿರುವ ಪ್ರದೇಶದಲ್ಲಿ ಕ್ರಿಸ್ಮಸ್ ಆಚರಿಸಲು ಇಷ್ಟಪಡ್ತಾರೆ. ಸಾಂಟಾ ಕೂಡ ಕ್ರಿಸ್ಮಸ್ ಸಂದರ್ಭದಲ್ಲಿ ಸಮುದ್ರ ಕಿನಾರೆಯಲ್ಲಿ ಕಾಣಿಸಿಕೊಳ್ತಾನೆ.

ಆಸ್ಟ್ರಿಯಾ:  ಇಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ಜನರು ಭೂತ-ಪ್ರೇತದ ವೇಷ ಧರಿಸಿ ಓಡಾಡ್ತಾರೆ. ದಾರಿಯಲ್ಲಿ ಸಿಗುವ ಮಕ್ಕಳಿಗೆ, ಹಿರಿಯರಿಗೆ ಭಯ ಹುಟ್ಟಿಸುತ್ತಾರೆ.

ಜೆಕ್ ಗಣರಾಜ್ಯ: ಕ್ರಿಸ್ಮಸ್ ಗೂ ಮುನ್ನ ಇಲ್ಲಿನ ಹುಡುಗಿಯರು ಚೆರ್ರಿ ಗಿಡವನ್ನು ಬೆಳೆಸುತ್ತಾರೆ. ಕ್ರಿಸ್ಮಸ್ ವೇಳೆಗೆ ಗಿಡದಲ್ಲಿ ಹೂ ಬಿಟ್ಟರೆ ಮುಂದಿನ ವರ್ಷ ಮದುವೆಯಾಗುತ್ತೆ ಎಂದು ಅರ್ಥೈಸಿಕೊಳ್ತಾರೆ.

ಫ್ರಾನ್ಸ್: ಇಲ್ಲಿನ ಮಕ್ಕಳು ರಾತ್ರಿ ತಮ್ಮ ಚಪ್ಪಲಿಗಳನ್ನು ಬೆಂಕಿ ಹಾಕುವ ಸ್ಥಳದಲ್ಲಿ ಇಟ್ಟು ಮಲಗ್ತಾರೆ. ರಾತ್ರಿ ಸಾಂಟಾ ಮನೆಗೆ ಬಂದು ಉಡುಗೊರೆ ನೀಡ್ತಾನೆ ಎಂಬ ನಂಬಿಕೆ ಅವ್ರದ್ದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...