ಚಳಿಗಾಲದಲ್ಲಿ ಸೂಪ್ ಕುಡಿಯುವುದು ಪ್ರಯೋಜನಕಾರಿ. ಶೀತ, ಜ್ವರ ಮುಂತಾದ ಕಾಯಿಲೆಗಳಿಂದ ರಕ್ಷಿಸಲು ಬಿಸಿ ಸೂಪ್ ಸೇವನೆ ಮಾಡಬೇಕು. ಚಳಿಗಾಲದಲ್ಲಿ ಸೂಪ್ ದೇಹದ ಶಾಖವನ್ನು ಹೆಚ್ಚಿಸುವುದಲ್ಲದೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಹ ನೀಡುತ್ತದೆ. ಮಾರುಕಟ್ಟೆಯಲ್ಲಿ ಅನೇಕ ರೀತಿಯ ರೆಡಿಮೇಡ್ ಸೂಪ್‌ಗಳು ಲಭ್ಯವಿದ್ದರೂ, ತಾಜಾ ತರಕಾರಿಗಳಿಂದ ನೀವು ಸೂಪ್ ತಯಾರಿಸಬಹುದು.
ಸಸ್ಯಾಹಾರಿ ಸೂಪ್ ಮಾಡಲು ಬಯಸಿದರೆ, ಕ್ಯಾರೆಟ್ ಸೂಪ್ ಒಳ್ಳೆಯದು. ಇದನ್ನು ತಯಾರಿಸಲು ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಕ್ಯಾರೆಟ್‌ನೊಂದಿಗೆ ಬೆರೆಸಿ ಲವಂಗ ಮತ್ತು ಕರಿಮೆಣಸಿನಂತಹ ಕೆಲವು ಮಸಾಲೆ ಹಾಕಿದ್ರೆ ಸೂಪ್ ರುಚಿ ಹೆಚ್ಚುವ ಜೊತೆಗೆ ಆರೋಗ್ಯ ವೃದ್ಧಿಸುತ್ತದೆ.
ಕೆಲವು ವರ್ಷಗಳ ಹಿಂದೆ ಹೆಚ್ಚಿನ ಜನರು ಟೊಮೆಟೊ, ಕ್ಯಾರೆಟ್, ಮಿಕ್ಸ್ ವೆಜ್, ಬೀಟ್ ರೋಟ್ ಮತ್ತು ಅಣಬೆಗಳಂತಹ ಕೆಲವೇ ಕೆಲವು ಸೂಪ್ ತಯಾರಿಸುತ್ತಿದ್ದರು. ಈಗ ಅನೇಕ ವಿಧದ ಸೂಪ್ ಬಂದಿವೆ. ನೀವು ಪಾಲಕ ಸೂಪ್ ಚಳಿಗಾಲದಲ್ಲಿ ಕುಡಿಯಬಹುದು. ಇದು ಸಾಕಷ್ಟು ಕಬ್ಬಿಣವನ್ನು ನೀಡುತ್ತದೆ. ಪಾಲಕ ಮತ್ತು ಶುಂಠಿ ಅಥವಾ ಪಾಲಕ ಮತ್ತು ಕಾರ್ನ್ ಸೂಪ್ ಬೆಸ್ಟ್.
ಸೂಪ್ ತಯಾರಿಸುವುದು ತುಂಬಾ ಸುಲಭ. ಮನೆಯಲ್ಲಿ ತರಕಾರಿ ಇದ್ದರೆ ಕೆಲವೇ ನಿಮಿಷಗಳಲ್ಲಿ ಸೂಪ್ ತಯಾರಾಗುತ್ತದೆ. ಉದಾಹರಣೆಗೆ, ಮನೆಯಲ್ಲಿ ಕ್ಯಾರೆಟ್ ಇದ್ದರೆ, ಅದಕ್ಕೆ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಕ್ಯಾರೆಟ್ ಸೂಪ್ ಮಾಡಿ. ಸ್ವಲ್ಪ ಪಾಲಕ ಇದ್ದರೆ ಅದನ್ನು ಕುದಿಸಿ ಮತ್ತು ಮಿಕ್ಸ್ ಮಾಡಿ ಮಸಾಲೆ ಬೆರೆಸಿ ಸೂಪ್ ತಯಾರಿಸಿ.
ಬಟಾಣಿ ಸೂಪ್ ತಯಾರಿಸುತ್ತಿದ್ದರೆ ಅದಕ್ಕೆ ಸ್ವಲ್ಪ ಪುದೀನ ಸೇರಿಸಿ. ಟೊಮೆಟೊ ಸೂಪ್ ರುಚಿಯನ್ನು ಶುಂಠಿ ಮತ್ತು ಬೆಳ್ಳುಳ್ಳಿ ಹೆಚ್ಚಿಸುತ್ತದೆ. ದಾಲ್ ಸೂಪ್ ತಯಾರಿಸುತ್ತಿದ್ದರೆ ಅದಕ್ಕೆ ಕರಿಬೇವಿನ ಎಲೆ ಮತ್ತು ಸಾಸಿವೆ ಸೇರಿಸಿ.