ದಪ್ಪ ಅವಲಕ್ಕಿ – 2 ಕಪ್
ತುರಿದ ಬೆಲ್ಲ – 3/4 ಕಪ್
ಒಣ ಕೊಬ್ಬರಿ ತುರಿ – 1/2 ಕಪ್
ಹುರಿದ ಎಳ್ಳಿನ ಪುಡಿ – 2 ಚಮಚ
ಹುರಿದ ಗಸಗಸೆ ಪುಡಿ – 2 ಚಮಚ
ಹುರಿಗಡಲೆ ಪುಡಿ – 3 ಚಮಚ
ಏಲಕ್ಕಿ ಪುಡಿ – 1/2 ಚಮಚ
ತುಪ್ಪದಲ್ಲಿ ಹುರಿದ ದ್ರಾಕ್ಷಿ – 10
ಗೋಡಂಬಿ – 10
ಕತ್ತರಿಸಿದ ಖರ್ಜೂರ – 3 ಚಮಚ
ಜೇನುತುಪ್ಪ – 1/2 ಚಮಚ
ತುಪ್ಪ – 4 ಚಮಚ
ಹಾಲು – 1/2 ಕಪ್
ಮಾಡುವ ವಿಧಾನ
ಅವಲಕ್ಕಿಯನ್ನು ಹುರಿದು ತಣಿಸಿ ತರಿತರಿಯಾಗಿ ಪುಡಿ ಮಾಡಿಡಬೇಕು. ಗೋಡಂಬಿ, ದ್ರಾಕ್ಷಿ, ಖರ್ಜೂರಗಳನ್ನು ತುಪ್ಪದಲ್ಲಿ ಹುರಿದಿಡಬೇಕು. ಬಾಣಲೆಗೆ ತುಪ್ಪ ಹಾಕಿ ಬೆಲ್ಲವನ್ನು ಸೇರಿಸಿ ಕರಗಿಸಬೇಕು. ಬೆಲ್ಲ ಕರಗಿದ ನಂತರ ಹುರಿದ ಅವಲಕ್ಕಿ, ಒಣಕೊಬ್ಬರಿ ತುರಿ, ಹುರಿದ ಎಳ್ಳಿನ ಪುಡಿ, ಹುರಿದ ಗಸಗಸೆ ಪುಡಿ, ಹುರಿಗಡಲೆ ಪುಡಿ, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಖರ್ಜೂರ, ಜೇನು ತುಪ್ಪ ಎಲ್ಲವನ್ನೂ ಕಲಕಿ ಒಲೆಯಿಂದ ಕೆಳಗಿಳಿಸಿ.
ಬಿಸಿ ಇರುವಾಗಲೇ ಕೈಗೆ ತುಪ್ಪ ಸವರಿಕೊಂಡು ಇಲ್ಲವೇ ಸ್ವಲ್ಪ ಹಾಲು ಬೆರೆಸಿ ಉಂಡೆ ಆಕಾರದಲ್ಲಿ ತಟ್ಟಿದರೆ ಅವಲಕ್ಕಿ ಉಂಡೆ ಸವಿಯಲು ಸಿದ್ಧ.