ದೀಪಾವಳಿ ಹತ್ತಿರ ಬರ್ತಿದೆ. ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ. ಧನ್ ತೇರಸ್ ಗೂ ಮುನ್ನವೇ ಮನೆಗಳನ್ನು ಸ್ವಚ್ಛಗೊಳಿಸುವ ಪದ್ಧತಿ ನಮ್ಮಲ್ಲಿದೆ. ಧನ್ವಂತರಿ ಪೂಜೆ ಮಾಡಿದ್ರೆ ಸಂಪತ್ತಿನ ಜೊತೆ ಆರೋಗ್ಯ ವೃದ್ಧಿಯಾಗುತ್ತದೆ. ಧನ್ವಂತರಿ ಒಲಿಸಿಕೊಳ್ಳಲು ಬಯಸುವವರು ಮನೆಯ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸಬೇಕು.
25 ವರ್ಷದ ಬಳಿಕ ಅರಳಿದೆ ವಿಚಿತ್ರ ಹೆಸರಿನ ಈ ಸಸ್ಯ…!
ದೀಪಾವಳಿ ಸ್ವಚ್ಛತೆಯನ್ನು ಪ್ರತಿಯೊಬ್ಬರೂ ಮಾಡ್ತಾರೆ. ಆದ್ರೆ ಧನ್ ತೇರಸ್ ದಿನ ಬೆಳಿಗ್ಗೆ ಬೇಗ ಎದ್ದು ಮನೆಯ ಈ ನಾಲ್ಕು ಜಾಗಗಳನ್ನು ಅವಶ್ಯಕವಾಗಿ ಸ್ವಚ್ಛಗೊಳಿಸಬೇಕು. ಮನೆಯ ಈಶಾನ್ಯ ಭಾಗ, ಪೂರ್ವ ಭಾಗ, ಉತ್ತರ ಭಾಗವನ್ನು ಅವಶ್ಯಕವಾಗಿ ಸ್ವಚ್ಛಗೊಳಿಸಬೇಕು. ಮನೆಯ ಮಧ್ಯ ಸ್ಥಳದಲ್ಲಿ ಅನಗತ್ಯ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಬೇಕು.
ಗಂಗಾ ಜಲವನ್ನು ಉತ್ತರ ದಿಕ್ಕಿಗೆ ಸಿಂಪಡಿಸಿ. ಮುಖ್ಯ ಅಂಶವೆಂದ್ರೆ ಮನೆಯನ್ನು ಸ್ವಚ್ಛಗೊಳಿಸಿದ ನಂತ್ರ ಪೊರಕೆಯನ್ನು ಯಾರೂ ಕಾಣದ ಜಾಗದಲ್ಲಿ ಇಡಿ. ಮನೆಗೆ ಬರುವವರ ಕಣ್ಣಿಗೆ ಪೊರಕೆ ಕಾಣಬಾರದು. ಅಕ್ವೇರಿಯಂ ಇದ್ರೆ ಅದರ ಸ್ವಚ್ಛತೆಯನ್ನೂ ಇದೇ ದಿನ ಮಾಡಿ. ಧನ್ ತೇರಸ್ ಸಂಜೆ, ಮನೆಯಲ್ಲಿ ಐದು ದೀಪಗಳನ್ನು ಬೆಳಗಿಸಿ. ನಿಮ್ಮ ಮನೆಯ ದೇವಾಲಯದಲ್ಲಿ ಒಂದು ದೀಪ, ಒಂದು ತುಳಸಿ, ಒಂದು ನೀರಿನ ಮಡಕೆ ಬಳಿ ಮತ್ತು ಎರಡು ದೀಪಗಳನ್ನು ಬಾಗಿಲಲ್ಲಿ ಇರಿಸಿ.