ಬೊಜ್ಜಿನಿಂದ ಹೊಟ್ಟೆ ಬರುವುದು ಬೇರೆ ಸಂಗತಿ. ಕೆಲವರಿಗೆ ಆಹಾರ ಸೇವಿಸಿದ ನಂತ್ರ ಹೊಟ್ಟೆ ದೊಡ್ದದಾಗುತ್ತದೆ. ಬೆಳಿಗ್ಗೆ ಸಣ್ಣಗಿದ್ದ ಹೊಟ್ಟೆ ರಾತ್ರಿಯಾಗುವ ವೇಳೆಗೆ ದೊಡ್ಡದಾಗಿರುತ್ತದೆ. ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುವುದು ಇದಕ್ಕೆ ಕಾರಣ. ಆಹಾರ ಸೇವನೆ ವಿಧಾನದಲ್ಲಿ ಆಗುವ ತಪ್ಪುಗಳು ಆಹಾರ ಸೇವನೆ ಮಾಡಿದ ನಂತ್ರ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಗೆ ಕಾರಣವಾಗುತ್ತದೆ.
ಆಹಾರವನ್ನು ಆತುರದಲ್ಲಿ ಸೇವನೆ ಮಾಡುವುದ್ರಿಂದ ಹಾಗೂ ಜಗಿಯದೆ ಸೇವನೆ ಮಾಡುವುದ್ರಿಂದ ಗ್ಯಾಸ್ ಯಾಗುತ್ತದೆ. ಆಹಾರ ಸೇವನೆ ಮಾಡುವಾಗ ಅತಿಯಾದ ಮಾತು ಮತ್ತು ಟಿವಿ ನೋಡುತ್ತ ಆಹಾರ ಸೇವನೆ ಮಾಡುವುದು ಕೂಡ ಇದಕ್ಕೆ ಕಾರಣ.
ವ್ಯಕ್ತಿಯೊಬ್ಬ ವಿರಾಮ ಚಿಹ್ನೆ ಹಾಕುವುದು ಮರೆತಿದ್ದಕ್ಕೆ ಏನಾಯ್ತು ಗೊತ್ತಾ….?: ಇಂಥ ಮಿಸ್ಟೇಕ್ ಮಾಡುವ ಮುನ್ನ ಹುಷಾರ್…!
ಆಶ್ಚರ್ಯಕರ ವಿಷ್ಯವೆಂದ್ರೆ ನೀವು ಸಣ್ಣ ಪುಟ್ಟ ವಿಚಾರಕ್ಕೆ ಹೆಚ್ಚು ಒತ್ತಡಕ್ಕೊಳಗಾದ್ರೆ ಅದು ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗಲು ಕಾರಣಉತ್ಪತ್ತಿವಾಗುತ್ತದೆ. ಒತ್ತಡದಿಂದಾಗಿ ಮೆದುಳಿನಲ್ಲಿ ಬಿಡುಗಡೆಯಾಗುವ ಹಾರ್ಮೋನ್ ನಿಮ್ಮ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದ ಕಾರಣ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ತಡವಾಗಿ ಮಲಗುವುದು ಮತ್ತು ತಡವಾಗಿ ಏಳುವುದು ಕೂಡ ಗ್ಯಾಸ್ ಗೆ ಮುಖ್ಯ ಕಾರಣ.
ರಾತ್ರಿ 12 ಗಂಟೆ ನಂತ್ರ ಮಲಗಿದ್ರೆ ಹೊಟ್ಟೆಯಲ್ಲಿ ಅನಿಲ ಸಮಸ್ಯೆ ಕಾಡುತ್ತದೆ. ಈ ಗ್ಯಾಸ್ ಸಮಸ್ಯೆ ಅನೇಕ ದಿನಗಳ ಕಾಲ ನಿಮ್ಮನ್ನು ಕಾಡುತ್ತದೆ. ನಿದ್ರೆ ಮೇಲೂ ಇದು ಪರಿಣಾಮ ಬೀರುತ್ತದೆ. ಅನಿಲ ಸಮಸ್ಯೆಯಿರುವವರು ಗ್ಯಾಸ್ ಹೆಚ್ಚು ಮಾಡುವ ಆಹಾರದಿಂದ ದೂರವಿರಬೇಕು.