![](https://kannadadunia.com/wp-content/uploads/2018/08/saved-lots-of-money-working-from-home-now-power-your-dream.png)
ದೀಪಾವಳಿ ಹಿಂದೂ ಧರ್ಮದ ದೊಡ್ಡ ಹಬ್ಬ. ಈ ದಿನ ಲಕ್ಷ್ಮಿ- ಗಣೇಶನನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ದೇವಿಯ ಆರಾಧನೆಯು ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದಲ್ಲದೆ, ದೀಪಾವಳಿಯ ಮೊದಲು ಮನೆಗೆ ಕೆಲವು ವಿಶೇಷ ವಸ್ತುಗಳನ್ನು ತರುವುದ್ರಿಂದ ಸಂಪತ್ತು ಮತ್ತು ಸಮೃದ್ಧಿ ಸಿಗಲಿದೆ ಎಂಬ ನಂಬಿಕೆಯಿದೆ.
ಟೀಂ ಇಂಡಿಯಾ ತಂಡದ ಹೆಡ್ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕಕ್ಕೆ ಕೌಂಟ್ಡೌನ್; ಉನ್ನತ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ‘ದಿ ವಾಲ್’
ಲಕ್ಷ್ಮಿ ದೇವಿಯ ಕೃಪೆಯನ್ನು ಪಡೆಯಲು ಶ್ರೀಯಂತ್ರವನ್ನು ಮನೆಯಲ್ಲಿ ಸ್ಥಾಪಿಸಿ ಪೂಜಿಸಲಾಗುತ್ತದೆ. ಮಾ ಲಕ್ಷ್ಮಿಯಲ್ಲದೆ ಶ್ರೀಯಂತ್ರದಲ್ಲಿ ಇನ್ನೂ 33 ದೇವತೆಗಳ ಚಿತ್ರಗಳಿವೆ. ಅದನ್ನು ಮನೆಗೆ ತರುವುದು ಅದೃಷ್ಟವನ್ನು ಹೆಚ್ಚಿಸುತ್ತದೆ.
ಮೋತಿ ಶಂಖವನ್ನು ವಿಧಿ-ವಿಧಾನದ ಮೂಲಕ ಪೂಜೆ ಮಾಡಿ ಮನೆಯ ಕಪಾಟಿನಲ್ಲಿ ಇಡಬೇಕು. ಇದು ಹಣ ವೃದ್ಧಿಗೆ ಕಾರಣವಾಗುತ್ತದೆ.
ಧಾರ್ಮಿಕ ಗ್ರಂಥಗಳ ಪ್ರಕಾರ, ಲಕ್ಷ್ಮಿಮತ್ತು ಕವಡೆ ಸಮುದ್ರದಲ್ಲಿ ಹುಟ್ಟಿದವು. ಆದ್ದರಿಂದ ಕವಡೆ ಹಣವನ್ನು ಆಕರ್ಷಿಸುವ ನೈಸರ್ಗಿಕ ಗುಣವನ್ನು ಹೊಂದಿದೆ. ಹಾಗಾಗಿ ಇದು ಮನೆಯಲ್ಲಿರಬೇಕು.
ಕೆರೆಯಲ್ಲಿ ಈಜಲು ಹೋದವನ ಮೇಲೆ ಮೊಸಳೆ ದಾಳಿ: ಭಯಾನಕ ವಿಡಿಯೋ ವೈರಲ್
ಗೋಮತಿ ಚಕ್ರವು ಗುಜರಾತ್‌ನ ಗೋಮತಿ ನದಿಯಲ್ಲಿ ಕಂಡುಬರುತ್ತದೆ. ಇದನ್ನು ಸುದರ್ಶನ್ ಚಕ್ರ ಎಂದೂ ಕರೆಯುತ್ತಾರೆ. ನೀವು 11 ಚಕ್ರಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಅದನ್ನು ಸುರಕ್ಷಿತವಾಗಿರಿಸಿದರೆ, ಎಂದಿಗೂ ಹಣದ ಕೊರತೆಯಾಗುವುದಿಲ್ಲ.
ದೀಪಾವಳಿಗೂ ಮುನ್ನ ಸಣ್ಣ ತೆಂಗಿನಕಾಯಿಯನ್ನು ಮನೆಗೆ ತನ್ನಿ. ಇದು ಲಕ್ಷ್ಮಿಗೆ ಪ್ರಿಯ. ಸಾಮಾನ್ಯ ತೆಂಗಿನ ಕಾಯಿಗಿಂತ ಇದ್ರ ಗಾತ್ರ ಚಿಕ್ಕದಿರುತ್ತದೆ.
ಕಮಲದ ಬೀಜವನ್ನು ಮನೆಗೆ ತನ್ನಿ. ಇದು ಲಕ್ಷ್ಮಿಗೆ ಪ್ರಿಯವಾದ ವಸ್ತುಗಳಲ್ಲಿ ಒಂದು. ಇದು ಮನೆಯಲ್ಲಿದ್ದರೆ ಲಕ್ಷ್ಮಿ ಪ್ರಸನ್ನಳಾಗ್ತಾಳೆ ಎಂಬ ನಂಬಿಕೆಯಿದೆ.