ಕೆಲ ಆಹಾರಗಳು ಕಾಮಾಸಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತವೆ. ಮತ್ತೆ ಕೆಲ ಆಹಾರಗಳು ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತವೆ. ಸಂಭೋಗಕ್ಕಿಂತ ಮೊದಲು ಕೆಲ ಆಹಾರಗಳನ್ನು ಸೇವಿಸಿದ್ರೆ ಅವು ನಿಮ್ಮ ಮೂಡ್ ಹಾಳು ಮಾಡುವ ಜೊತೆಗೆ ಸಂಭೋಗಾಸಕ್ತಿಯನ್ನು ಕಡಿಮೆ ಮಾಡುತ್ತವೆ.
ಫ್ರೆಂಚ್ ಫ್ರೈಸ್ ಟ್ರಾನ್ಸ್-ಫ್ಯಾಟ್ ಹೊಂದಿರುತ್ತವೆ. ಇದು ಟೆಸ್ಟೋಸ್ಟೆರಾನ್ ಮಟ್ಟ ಹಾಗೂ ರಕ್ತಪರಿಚಲನೆ ಮೇಲೆ ಪ್ರಭಾವ ಬೀರುತ್ತದೆ. ಫ್ರೆಂಚ್ ಫ್ರೈಸ್ ನಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿರುವ ಕಾರಣ ಪುರುಷರು ನಿಮಿರುವಿಕೆಯ ತೊಂದರೆ ಅನುಭವಿಸುತ್ತಾರೆ.
ಸುಲಭವಾಗಿ ಮಾಡಿ ಕ್ಯಾರೆಟ್ – ಟೊಮೆಟೊ ಸೂಪ್
ಆಲ್ಕೋಹಾಲ್ ನಿಂದ ಮೆಲಟೋನಿನ್ ಮಟ್ಟ ಹೆಚ್ಚಿರುತ್ತದೆ. ಇದನ್ನು ಸ್ಲೀಪ್ ಹಾರ್ಮೋನ್ ಎಂದೂ ಕರೆಯುತ್ತಾರೆ. ಉತ್ಸಾಹ ಹೆಚ್ಚಿಸಿಕೊಳ್ಳಲು ಕೆಲವರು ಆಲ್ಕೋಹಾಲ್ ಸೇವನೆ ಮಾಡ್ತಾರೆ. ಆದ್ರೆ ಅದು ನಿಮಿರುವಿಕೆ ಸಮಸ್ಯೆ ಹಾಗೂ ಅಕಾಲಿಕ ಸ್ಖಲನದಂತಹ ಸಮಸ್ಯೆಗೆ ಕಾರಣವಾಗುತ್ತದೆ.
ಕಾಫಿ ಕುಡಿಯುವವರು ಉತ್ತೇಜನ ಹೆಚ್ಚಿಸಲು ಇದು ಬೇಕು ಎನ್ನುತ್ತಾರೆ. ಆದ್ರೆ ಅತಿ ಹೆಚ್ಚಿನ ಮಟ್ಟದಲ್ಲಿ ಕಾಫಿ ಸೇವನೆ ಮಾಡುವುದ್ರಿಂದ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ. ಹೆಚ್ಚು ಕಾಫಿ ಸೇವನೆ ನಂತ್ರ ದೇಹ ವಿಶ್ರಾಂತಿ ಬಯಸುತ್ತದೆ. ಸಂಭೋಗದ ಆಸಕ್ತಿ ಕಡಿಮೆಯಾಗುತ್ತದೆ.