ಫೈಬರ್ ನ ಆಗರವಾಗಿರುವ ಪಾಪ್ ಕಾರ್ನ್ ನಲ್ಲಿ ಹಲವಾರು ವೆರೈಟಿಗಳಿವೆ. ಕೇವಲ ಸಪ್ಪೆ ತಿನ್ನುವುದಕ್ಕಿಂತ ಅದಕ್ಕೆ ಕೆಲವು ಫ್ಲೇವರ್ ಗಳನ್ನು ಸೇರಿಸಿ ತಿಂದರೆ ರುಚಿ ಚೆನ್ನಾಗಿರುತ್ತದೆ. ಅಂತ ಫ್ಲೇವರ್ ಗಳ ವಿವರ ಇಲ್ಲಿದೆ.
ಸ್ಪೈಸಿ ಚಾಕ್ಲೇಟ್
ಉಪ್ಪು ಮತ್ತು ಸಿಹಿ ರುಚಿಯ ಈ ಪಾಪ್ ಕಾರ್ನ್ ಗೆ ಚಾಕಲೇಟ್ ಲೇಪವಿರುತ್ತದೆ. ಸಾಮಾನ್ಯ ಪಾಪ್‌ಕಾರ್ನ್ ಗಿಂತ ಇದು ಭಿನ್ನ ರುಚಿ ಹೊಂದಿರುತ್ತದೆ.
ಇಟಾಲಿಯನ್
ಒಮ್ಮೆ ತಿಂದರೆ ಮತ್ತೆ ತಿನ್ನಬೇಕೆಂಬ ವಿಶೇಷ ರುಚಿ ಇರುವ ಪಾಪ್‌ಕಾರ್ನ್ ಗೆ ಇಟಾಲಿಯನ್ ಸೀಸನಿಂಗ್ ಉದುರಿಸಿ ಆಮೇಲೆ ಚೀಸ್ ಹಾಕಲಾಗುತ್ತದೆ.
ಬೇಲ್
ಅಪ್ಪಟ ಇಂಡಿಯನ್ ರುಚಿಯ ಪಾಪ್ ಕಾರ್ನ್ ಗಳನ್ನು ಟೊಮೆಟೊ, ಈರುಳ್ಳಿ, ಸ್ಪ್ರಿಂಗ್ ಆನಿಯನ್, ಸೇವು ಮತ್ತು ನಿಂಬೆ ರಸ ಹಾಕಿ ಮಾಡಲಾಗುತ್ತದೆ.
ಕ್ಯಾರಮೆಲ್
ಸಿಹಿ ಪ್ರಿಯರಿಗೆ ಇಷ್ಟವಾಗುವ ಈ ಫ್ಲೇವರ್ ಸಿಹಿ, ಉಪ್ಪು ರುಚಿಯಿಂದ ಕೂಡಿರುತ್ತದೆ.
ಮಸಾಲ
ಚಾಟ್ ಮಸಾಲ ಮತ್ತು ಸ್ವಲ್ಪ ಮೆಣಸಿನ ಪುಡಿ ಉದುರಿಸಿ ಮಸಾಲ ಪಾಪ್‌ಕಾರ್ನ್ ತಯಾರಿಸಲಾಗುತ್ತದೆ.
ಪ್ಲೇಕಿ
ಉಪ್ಪು ಮತ್ತು ಬೆಣ್ಣೆ ಹಾಕಿ ಮಾಡಲಾಗುವ ಗರಿಗರಿಯಾದ ಈ ಪಾಪ್‌ಕಾರ್ನ್ ಪರಿಮಳವೇ ವಿಶೇಷವಾಗಿರುತ್ತದೆ.