ನೈಸರ್ಗಿಕ ಸಕ್ಕರೆ, ಗ್ಲುಕೋಸ್, ಸುಕ್ರೋಸ್ ಮತ್ತು ಫ್ರುಕ್ಟೋಸ್ ಒಳಗೊಂಡಿರುವ ಹಣ್ಣು ಖರ್ಜೂರ. ಖರ್ಜೂರವನ್ನು ನಿತ್ಯ ಒಂದೆರಡು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಎಸಿಡಿಟಿ ಮತ್ತು ಎದೆ ಉರಿ ಇದ್ದವರಿಗೆ ಖರ್ಜೂರ ಬೆಸ್ಟ್. ಒಂದು ಖರ್ಜೂರ ಈ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ವಿಟಮಿನ್, ಖನಿಜಾಂಶಗಳು ಹೆಚ್ಚಿವೆ.
ಈ ಸಿಂಪಲ್ ಟ್ರಿಕ್ ಬಳಸಿದರೆ ʼಮಗ್ಗಿʼ ಸಲೀಸು
ಹೃದ್ರೋಗ ಸಮಸ್ಯೆ ಕಡಿಮೆ ಮಾಡಲು ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಜ್ಯೂಸ್ ರೀತಿ ಮಾಡಿ ಕುಡಿಯಿರಿ.
ಖರ್ಜೂರ ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಉತ್ತಮ. ಇದು ಕ್ಯಾನ್ಸರ್ ಮತ್ತು ಹೃದಯ ಸಂಬಂಧಿತ ಖಾಯಿಲೆಗೂ ಬಹಳ ಪ್ರಯೋಜನಕಾರಿಯಾಗಿದೆ.
ಖರ್ಜೂರದಲ್ಲಿರು ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಗಳು ಚಳಿಗಾಲದಲ್ಲಿ ದೇಹದ ಉಷ್ಣತೆ ಮತ್ತು ಶಕ್ತಿ ಒದಗಿಸುತ್ತವೆ.
ಬ್ಲಡ್ ಪ್ರೆಶರ್ ಮತ್ತು ಮಲಬದ್ದತೆಯಿಂದ ದೂರವಿಡಲು ಖರ್ಜೂರ ಬಳಸಿ.
ಚಳಿಗಾಲದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 2-3 ಖರ್ಜೂರ ತಿಂದು ಶ್ವಾಸಕೋಶದ ಸಮಸ್ಯೆ ಕಡಿಮೆ ಮಾಡಿಕೊಳ್ಳಿ.