ಈ ಹೂವಿನ ಹೆಸರು ನೀಲ ಕುರಿಂಜಿ. ಕೊಡಗು, ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ, ಮುಳ್ಳಯ್ಯನ ಗಿರಿ, ಕೇರಳದ ನೀಲಗಿರಿ ಬೆಟ್ಟಗಳಲ್ಲಿ ಈ ಹೂವು 5 ರಿಂದ 12 ವರ್ಷಗಳಿಗೊಮ್ಮೆ ಅರಳುತ್ತದೆ. ಇದನ್ನು ನೋಡಲು ಪ್ರಕೃತಿಪ್ರಿಯರು ಪಶ್ಚಿಮ ಘಟ್ಟಗಳ ಆಯ್ದ ಧಾಮಗಳಿಗೆ ಹೋಗುತ್ತಾರೆ.
ನೀಲಿ ಬಣ್ಣದ ನೀಲಕುರಿಂಜಿ ಹೂವು ನೋಡಲು ಸುಂದರವಾಗಿರುತ್ತದೆ. ನೀಲಕುರಿಂಜಿ ಹೂವು ಆಗಸ್ಟ್ ಹಾಗೂ ಸೆಪ್ಟೆಂಬರ್ ಮಧ್ಯೆ ಅರಳುತ್ತದೆ. ಸಂಪೂರ್ಣ ಬೆಟ್ಟವನ್ನು ನೀಲಿ ಬಣ್ಣದಿಂದ ಆವರಿಸುವ ಈ ಹೂವುಗಳು ಇದೀಗ ಚಿಕ್ಕಮಗಳೂರಿನ ಬೆಟ್ಟಗಳಲ್ಲಿ ಅರಳುತ್ತಿದ್ದು, ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.
ಪ್ರೇಮದ ಸಂಕೇತ ಎಂದು ಕರೆಯಲಾಗುವ ಈ ಹೂವಿನ 250ಕ್ಕೂ ಹೆಚ್ಚು ವಿಧಗಳು ವರ್ಷದ ಬೇರೆ ಬೇರೆ ಅವಧಿಯಲ್ಲಿ ಅರಳುತ್ತವೆ. ಕೆಲವೊಂದು ತಳಿಗಳು 14 ವರ್ಷಗಳಿಗೊಮ್ಮೆ ಅರಳುತ್ತವೆ. ಭಾರತದಲ್ಲಿ ನೀಲಕುರಿಂಜಿಯ 46 ವಿಧಗಳು ಕಂಡುಬರುತ್ತವೆ. ಈ ಸಸಿಯಲ್ಲಿ ಔಷಧೀಯ ಗುಣಗಳೂ ಇವೆ.