
ಪ್ರವಾಸಕ್ಕೆ ಹೊರಡಬೇಕಾದರೆ ಗಡಿಬಿಡಿಯಲ್ಲಿ ಪ್ಯಾಕಿಂಗ್ ಮಾಡೋದ್ರಿಂದ ಮುಖ್ಯವಾದ ವಸ್ತುಗಳೇ ಮರೆತುಹೋಗೋ ಸಾಧ್ಯತೆ ಇರುತ್ತೆ. ಹೊರಟಾದ ಮೇಲೆ ಕೊರಗೋಕಿಂತ ಮೊದಲೇ ಎಚ್ಚೆತ್ತುಕೊಂಡರೆ ಒಳ್ಳೆಯದಲ್ಲವೇ? ಅದಕ್ಕಾಗಿಯೇ ಟ್ರಿಪ್ ಪ್ಯಾಕಿಂಗ್ ಮಾಡಬೇಕಾದರೆ ಮರೆಯಲೇಬಾರದ ವಸ್ತುಗಳ ಪಟ್ಟಿ ಇಲ್ಲಿದೆ.
ನೀವು ತೆಗೆದುಕೊಂಡು ಹೋಗಲೇ ಬೇಕಾದ ವಸ್ತುಗಳ ಲಿಸ್ಟ್ ಮಾಡಿಕೊಳ್ಳಿ.
ಏರ್ ಪೋರ್ಟ್ ನಲ್ಲಿ ಲಗ್ಗೇಜ್ ತೂಕದ ಲಿಮಿಟ್ ಇರತ್ತೆ ಅನ್ನೋದು ನೆನಪಿರಲಿ.
BREAKING NEWS: ಎಂಎಲ್ಸಿ ಚುನಾವಣೆ ಹಿನ್ನೆಲೆ, ಇಬ್ಬರು ಡಿಸಿಗಳ ಎತ್ತಂಗಡಿ
ನಿಮಗೆ ಅಗತ್ಯವಾಗಿ ಬೇಕಾಗಬಹುದಾದ ಔಷಧಗಳನ್ನು ತೆಗೆದುಕೊಳ್ಳಲು ಮರೆಯದಿರಿ.
ಟ್ರಿಪ್ ನಿಂದ ವಾಪಸ್ ಬರುವಾಗ ನೀವು ಶಾಪಿಂಗ್ ಮಾಡಿಯೇ ಇರುತ್ತೀರಿ. ಇದಕ್ಕಾಗಿ ನಿಮ್ಮ ಬ್ಯಾಗ್ ನಲ್ಲಿ ಜಾಗ ಮೀಸಲಿರಿಸೋದನ್ನು ಮರೆಯದಿರಿ.
ಅಮೂಲ್ಯವಾದ ಲ್ಯಾಪ್ ಟಾಪ್, ಚಾರ್ಜರ್, ಪೋನ್, ಕ್ಯಾಮರಾ ಮುಂತಾದವುಗಳನ್ನು ನಿಮ್ಮ ಹ್ಯಾಂಡ್ ಬ್ಯಾಗ್ ನಲ್ಲಿಟ್ಟುಕೊಳ್ಳೋಕೆ ಮರೆಯದಿರಿ.
ನೀವು ಹೊರಟಿರೋ ಜಾಗದ ಹವಾಮಾನ ತಿಳಿದುಕೊಂಡು ಪ್ಯಾಕಿಂಗ್ ಮಾಡಿಕೊಳ್ಳಿ.
ದ್ರಾವಿಡ್ ಪುತ್ರನೊಂದಿಗೆ ಮಾತನಾಡಿದ್ದ ಸಂಗತಿಯನ್ನು ಮೆಲುಕು ಹಾಕಿದ ಗಂಗೂಲಿ..!
ಬಟ್ಟೆಗಳನ್ನು ಸರಿಯಾಗಿ ವಿಂಗಡಿಸಿ ಪ್ಯಾಕಿಂಗ್ ಮಾಡಿ.
ಒಡೆಯಬಹುದಾದ ಅಥವಾ ಚೆಲ್ಲಬಹುದಾದ ವಸ್ತುಗಳನ್ನು ಪ್ಲಾಸ್ಟಿಕ್ ಬ್ಯಾಗ್ ನಿಂದ ಎರಡು ಬಾರಿ ಸುತ್ತಿಡಿ.
ಟಿಕೆಟ್, ಪಾಸ್ ಪೋರ್ಟ್, ಐಡಿ ಕಾರ್ಡ್ ಗಳಂತಹ ಡಾಕ್ಯುಮೆಂಟ್ ತೆಗೆದುಕೊಂಡು ಹೋಗಲು ಮರೆಯದಿರಿ.