ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆಲ್ಲ ಸೈಬರ್ ಕ್ರಿಮಿನಲ್ ಗಳ ಸಂಖ್ಯೆಯೂ ಹೆಚ್ಚಾಗಿದೆ. ಬಳಕೆದಾರರ ಡೇಟಾ ಕಳವು, ಖಾತೆಗಳನ್ನು ಹ್ಯಾಕ್ ಮಾಡೋದು ಸರ್ವೇಸಾಮಾನ್ಯವಾಗಿದೆ. ಫೇಸ್ಬುಕ್ ನಲ್ಲೂ ಇಂತಹ ಅಕ್ರಮ ನಡೆಯುತ್ತಿದೆ.
ಹಾಗಾಗಿ ನಿಮ್ಮ ಫೇಸ್ಬುಕ್ ಖಾತೆ ಸುರಕ್ಷಿತವಾಗಿದೆಯಾ ಅನ್ನೋದನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಖಾತೆಯನ್ನು ಹ್ಯಾಕ್ ಮಾಡುವ ಪ್ರಯತ್ನ ನಡೆಯುತ್ತಿದ್ಯಾ? ಅಥವಾ ಯಾವುದೇ ಅನುಮಾನಾಸ್ಪದ ಚಟುವಟಿಕೆ ನಡೆದಿದ್ಯಾ ಅನ್ನೋದನ್ನು ನೀವೇ ಪತ್ತೆ ಮಾಡಬಹುದು.
ಫೇಸ್ಬುಕ್ ಓಪನ್ ಮಾಡಿ, ಬಲಭಾಗದ ತುದಿಯಲ್ಲಿರುವ ಏರೋ ಮಾರ್ಕ್ ಕ್ಲಿಕ್ ಮಾಡಿ.
ಬಳಿಕ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ.
ಸೆಕ್ಯೂರಿಟಿ ಆಪ್ಷನ್ ಕ್ಲಿಕ್ ಮಾಡಿ ಮತ್ತು ಎಡಭಾಗದಲ್ಲಿ ಲಾಗಿನ್ ಆಗಿ.
ನಿಮ್ಮ ಫೇಸ್ಬುಕ್ ಖಾತೆಗೆ ಲಾಗಿನ್ ಆಗಲು ಬಳಸಿರೋ ಗೆಜೆಟ್ಸ್ ಗಳೆಲ್ಲ ಅಲ್ಲಿ ಕಾಣಸಿಗುತ್ತವೆ.
ಅಲ್ಲಿ ನಿಮಗೆ ಗುರುತಿಲ್ಲದ ಡಿವೈಸ್ ಪತ್ತೆಯಾದಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಮಾಡಲು ಪ್ರಯತ್ನ ನಡೆದಿದೆ ಎಂದರ್ಥ. ಅದನ್ನು ತಿಳಿದುಕೊಳ್ಳಲು ಪ್ರತಿ ಡಿವೈಸ್ ನ ಬಲಭಾಗದಲ್ಲಿರುವ ಥ್ರೀ ಡಾಟ್ ಐಕಾನ್ ಮೇಲೆ ನಾಟ್ ಯು ಎಂಬ ಆಪ್ಷನ್ ಕ್ಲಿಕ್ ಮಾಡಿ.
ಆಗ ಫೇಸ್ಬುಕ್ ನಿಮ್ಮ ಬಳಿ ಅಕೌಂಟ್ ಸೆಕ್ಯೂರ್ ಮಾಡುವಂತೆ ಸೂಚಿಸುತ್ತದೆ. ಅದಕ್ಕೆ ಬೇಕಾದ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತದೆ.
ಪ್ರತಿ ಡಿವೈಸ್ ಗೂ ಲಾಗೌಟ್ ಆಗಲು ಆಪ್ಷನ್ ಲಭ್ಯವಾಗುತ್ತದೆ. ಎಲ್ಲಾ ಡಿವೈಸ್ ಗಳನ್ನು ಒಟ್ಟೊಟ್ಟಿಗೇ ಲಾಗೌಟ್ ಮಾಡಲು ಕೂಡ ಆಪ್ಷನ್ ಲಭ್ಯವಿದೆ.
ನಿಮ್ಮ ಖಾತೆಯನ್ನು ಇನ್ನಷ್ಟು ಸೆಕ್ಯೂರ್ ಮಾಡಲು 2 ಫ್ಯಾಕ್ಟರ್ ಅಥೆಂಟಿಕೇಶನ್ ಮಾಡಿಕೊಳ್ಳಬಹುದು.