HomeLatest Newsಮುಂಬೈನ ಸಿಮ್ ರೇಸಿಂಗ್ ಕಾದಾಟ: ಟೀಮ್ ಸ್ಪೇನ್ ವೈಟ್‌ಗೆ 'ಕಪ್ ಆಫ್ ನೇಷನ್ಸ್' ಕಿರೀಟ

ಮುಂಬೈನ ಸಿಮ್ ರೇಸಿಂಗ್ ಕಾದಾಟ: ಟೀಮ್ ಸ್ಪೇನ್ ವೈಟ್‌ಗೆ ‘ಕಪ್ ಆಫ್ ನೇಷನ್ಸ್’ ಕಿರೀಟ

ಮುಂಬೈನ ಎನ್‌ಎಸ್‍ಸಿಐ ಡೋಮ್‌ನಲ್ಲಿ ಮೂರು ದಿನಗಳ ಕಾಲ ನಡೆದ ಜಾಗತಿಕ ಮಟ್ಟದ ಎಫ್‌1 ಸಿಮ್ ರೇಸಿಂಗ್ ಚಾಂಪಿಯನ್‌ಷಿಪ್‌ನ ‘ಕಪ್ ಆಫ್ ನೇಷನ್ಸ್’ ಪ್ರಶಸ್ತಿಯನ್ನು ಟೀಮ್ ಸ್ಪೇನ್ ವೈಟ್ ತನ್ನದಾಗಿಸಿಕೊಂಡಿದೆ. ಮುಂಬೈ ಫಾಲ್ಕನ್ಸ್ ರೇಸಿಂಗ್ ಲಿಮಿಟೆಡ್ (ಎಂಎಫ್‌ಆರ್‌ಎಲ್) ಹಾಗೂ ಫಾರ್ಮುಲಾ 1 ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಬಿಗ್ ಈವೆಂಟ್‌ನಲ್ಲಿ ಜಗತ್ತಿನ 20 ವಿಶ್ವ ಚಾಂಪಿಯನ್ ಸೇರಿದಂತೆ ಒಟ್ಟು 40 ಚಾಲಕರು ಭಾಗವಹಿಸಿದ್ದರು.

ಟೀಮ್ ಸ್ಪೇನ್ ವೈಟ್ ಪರ ಕಣಕ್ಕಿಳಿದಿದ್ದ ಇಸ್ಮಾಯೆಲ್ ಫಾಹ್ಸಿ ಫೈನಲ್‌ನ ಎಲ್ಲಾ ನಾಲ್ಕೂ ರೇಸ್‌ಗಳಲ್ಲಿ ಜಯಗಳಿಸಿ ಒಟ್ಟು 103 ಅಂಕಗಳೊಂದಿಗೆ ತಂಡಕ್ಕೆ ಚಾಂಪಿಯನ್ ಪಟ್ಟ ಗೆದ್ದುಕೊಟ್ಟರು. ಅವರ ಸಹಸ್ಪರ್ಧಿ ಅಲೆಜಾಂಡ್ರೊ ಲೌರೆರೊ ಉತ್ತಮ ಸಾಥ್ ನೀಡಿದರು. 60 ಅಂಕ ಪಡೆದ ಟೀಮ್ ನೆದರ್‌ಲ್ಯಾಂಡ್ಸ್ ರೆಡ್ ಎರಡನೇ ಸ್ಥಾನ ಪಡೆದರೆ, 49 ಅಂಕ ಗಳಿಸಿದ ಟೀಮ್ ಹಂಗೇರಿ ರೆಡ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಭಾರತದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಸಿಮ್ ರೇಸಿಂಗ್ ಸರಣಿಯಲ್ಲಿ ‘ಟೀಮ್ ಇಂಡಿಯಾ ಆರೆಂಜ್’ ಪರ ಕರ್ಲ್ ವರ್ಗೀಸ್ ಮತ್ತು ಸಿದ್ಧಾರ್ಥ್ ಸತ್ಘಾರೆ ಸ್ಪರ್ಧಿಸಿದ್ದರು.

ಮೆಕ್ಸಿಕೋ, ಬ್ರೆಜಿಲ್, ಕತಾರ್ ಹಾಗೂ ಯುಎಇ ಕ್ರೀಡಾಂಗಣಗಳ ನಾಲ್ಕು ವರ್ಚುವಲ್ ಟ್ರ್ಯಾಕ್‌ಗಳಲ್ಲಿ ಗ್ರ್ಯಾಂಡ್ ಫೈನಲ್ ಪಂದ್ಯಗಳು ಜರುಗಿದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇಶದಲ್ಲಿ ಮೋಟಾರ್ ಸ್ಪೋರ್ಟ್ಸ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ಎಂಎಫ್‌ಆರ್‌ಎಲ್ ‘ಒನ್ ಇನ್ ಎ ಬಿಲಿಯನ್’ ಉಪಕ್ರಮದಡಿ 3 ಕೋಟಿ ರೂಪಾಯಿಗಳ ಚಾಲಕರ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸಿದೆ. ಭಾರತದ ಉದಯೋನ್ಮುಖ ರೇಸಿಂಗ್ ಪ್ರತಿಭೆಗಳನ್ನು ಗುರುತಿಸಿ, ಅಂತಾರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. 2019ರಲ್ಲಿ ಸ್ಥಾಪನೆಯಾದ ಮುಂಬೈ ಫಾಲ್ಕನ್ಸ್ ಎಫ್‌ಐಎ ಅಂಗೀಕೃತ ಸಿಂಗಲ್ ಸೀಟರ್ ಚಾಂಪಿಯನ್‌ಷಿಪ್ ಗೆದ್ದ ಮೊದಲ ಭಾರತೀಯ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular