HomeLatest Newsಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ವನಿತೆಯರ ಅಬ್ಬರ: ಉಜ್ಬೇಕಿಸ್ತಾನ್ ವಿರುದ್ಧ 19-0 ಅಂತರದ ಭರ್ಜರಿ ಗೆಲುವು!

ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ವನಿತೆಯರ ಅಬ್ಬರ: ಉಜ್ಬೇಕಿಸ್ತಾನ್ ವಿರುದ್ಧ 19-0 ಅಂತರದ ಭರ್ಜರಿ ಗೆಲುವು!

ಜಪಾನ್‌ನ ಕಾಕಾಮಿಗಹರಾ ನಗರದ ಗಿಫು ಪ್ರಿಫೆಕ್ಚರಲ್ ಗ್ರೀನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಷ್ಯನ್ ಗೇಮ್ಸ್ 2026ರ ಪೂಲ್ ‘ಬಿ’ ಆರಂಭಿಕ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡವು ಉಜ್ಬೇಕಿಸ್ತಾನ್ ವಿರುದ್ಧ 19-0 ಗೋಲುಗಳ ಅಂತರದಿಂದ ಐತಿಹಾಸಿಕ ಹಾಗೂ ಬೃಹತ್ ಗೆಲುವು ಸಾಧಿಸಿದೆ.

ಈ ಪಂದ್ಯದಲ್ಲಿ ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ ದೀಪಿಕಾ ಏಕಾಂಗಿಯಾಗಿ 8 ಗೋಲುಗಳನ್ನು ಬಾರಿಸಿ ಗೆಲುವಿನ ರೂವಾರಿಯಾದರು. ಇಶಿಕಾ 3 ಗೋಲು ಗಳಿಸಿದರೆ, ಲಾಲ್ಥಾಂತ್ಲುವಾಂಗಿ ಮತ್ತು ನೇಹಾ ತಲಾ 2 ಗೋಲು ಬಾರಿಸಿದರು. ಬಲ್ಜೀತ್ ಕೌರ್, ನವನೀತ್ ಕೌರ್, ಲಾಲ್ರೆಮ್ಸಿಯಾಮಿ ಹಾಗೂ ಸಾಕ್ಷಿ ರಾಣಾ ತಲಾ ಒಂದೊಂದು ಗೋಲು ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕೊಡುಗೆ ನೀಡಿದರು.

ಪಂದ್ಯದ ಮೊದಲಾರ್ಧದಲ್ಲೇ ದೀಪಿಕಾ ಅವರ ಹ್ಯಾಟ್ರಿಕ್ ನೆರವಿನಿಂದ ಭಾರತ 8-0 ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲೂ ಸಂಪೂರ್ಣ ಪಾರಮ್ಯ ಮೆರೆದ ದೀಪಿಕಾ ಸತತ 4 ಗೋಲುಗಳನ್ನು ಬಾರಿಸಿ ತಂಡದ ಮುನ್ನಡೆಯನ್ನು 13-0ಗೆ ಹೆಚ್ಚಿಸಿದರು. ಬಳಿಕ ಇತರ ಆಟಗಾರರು ಸಹ ಗೋಲುಗಳ ಮಳೆ ಹರಿಸಿದ್ದರಿಂದ ಉಜ್ಬೇಕಿಸ್ತಾನ್ ಸಂಪೂರ್ಣವಾಗಿ ಶರಣಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪಂದ್ಯವು ಭಾರತದ ಅನುಭವಿ ಆಟಗಾರ್ತಿ ಸವಿತಾ ಪುನಿಯಾ ಅವರಿಗೆ 320ನೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ವಂದನಾ ಕಟಾರಿಯಾ ಅವರೊಂದಿಗೆ ಜಂಟಿಯಾಗಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಭಾರತೀಯ ಮಹಿಳಾ ಹಾಕಿ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮತ್ತೊಂದೆಡೆ ಬಲ್ಜೀತ್ ಕೌರ್ ತಮ್ಮ 50ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಪೂರ್ಣಗೊಳಿಸಿದರು.

ಸಲಿಮಾ ಟೇಟೆ ನಾಯಕತ್ವದ ಭಾರತೀಯ ಮಹಿಳಾ ಹಾಕಿ ತಂಡವು ಮುಂಬರುವ 2028ರ ಲಾಸ್ ಎಂಜಲೀಸ್ ಒಲಿಂಪಿಕ್ಸ್ ಅರ್ಹತೆಯ ಮೇಲೆ ಕಣ್ಣಿಟ್ಟಿದ್ದು, ಏಷ್ಯನ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ನೇರ ಅರ್ಹತೆ ಪಡೆಯುವ ಗುರಿ ಹೊಂದಿದೆ. ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡವು ಸೋಮವಾರ ಇಂಡೋನೇಷ್ಯಾವನ್ನು ಎದುರಿಸಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular