HomeLatest Newsಮಗಳ 29ನೇ ಬರ್ತ್‌ಡೇಗೆ ಸಚಿನ್ ತೆಂಡೂಲ್ಕರ್ ಭಾವುಕ ಸಂದೇಶ: 'ಮಾಸ್ಟರ್ ಬ್ಲಾಸ್ಟರ್' ಪೋಸ್ಟ್ ವೈರಲ್!

ಮಗಳ 29ನೇ ಬರ್ತ್‌ಡೇಗೆ ಸಚಿನ್ ತೆಂಡೂಲ್ಕರ್ ಭಾವುಕ ಸಂದೇಶ: ‘ಮಾಸ್ಟರ್ ಬ್ಲಾಸ್ಟರ್’ ಪೋಸ್ಟ್ ವೈರಲ್!

ಕ್ರಿಕೆಟ್ ಜಗತ್ತಿನ ಸರ್ವಶ್ರೇಷ್ಠ ಆಟಗಾರ, ‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡೂಲ್ಕರ್ ತಮ್ಮ ಮುದ್ದು ಮಗಳು ಸಾರಾ ತೆಂಡೂಲ್ಕರ್ ಅವರ 29ನೇ ಜನ್ಮದಿನದ ಅಂಗವಾಗಿ ಅತ್ಯಂತ ಭಾವುಕ ಹಾಗೂ ಪ್ರೀತಿಯ ಶುಭಾಶಯ ಕೋರಿದ್ದಾರೆ. ಅಕ್ಟೋಬರ್ 12 ರಂದು 29ನೇ ವಸಂತಕ್ಕೆ ಕಾಲಿಟ್ಟ ಸಾರಾ ಅವರೊಂದಿಗೆ ಇರುವ ಸುಂದರವಾದ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಸಚಿನ್, ತಂದೆ-ಮಗಳ ಬಾಂಧವ್ಯದ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.

“ಒಂದು ಕಾಲದಲ್ಲಿ ನಿನ್ನ ಕೈಹಿಡಿದು ದಾರಿ ತೋರಿಸುತ್ತಿದ್ದವನು ನಾನು. ಆದರೆ ಈಗ ನೀನು ಆಯ್ಕೆ ಮಾಡಿಕೊಳ್ಳುವ ಹಾದಿಯನ್ನು ಸಂತೋಷದಿಂದ ನೋಡುವ ಭಾಗ್ಯ ನನ್ನದಾಗಿದೆ. ಜನ್ಮದಿನದ ಶುಭಾಶಯಗಳು ಸಾರಾ, ಲವ್ ಯೂ,” ಎಂದು ಸಚಿನ್ ಸುಂದರ ಸಾಲುಗಳನ್ನು ಬರೆದುಕೊಂಡಿದ್ದಾರೆ. ಈ ಭಾವುಕ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದೆ.

ಸಚಿನ್ ತೆಂಡೂಲ್ಕರ್ ಮಗಳಾಗಿದ್ದರೂ, ಸಾರಾ ತಮ್ಮದೇ ಆದ ಸ್ವತಂತ್ರ ಗುರುತನ್ನು ನಿರ್ಮಿಸಿಕೊಂಡಿದ್ದಾರೆ. ಅವರು ಮಾನ್ಯತೆ ಪಡೆದ ಬಯೋಮೆಡಿಕಲ್ ಸೈಂಟಿಸ್ಟ್ ಮತ್ತು ಪೌಷ್ಟಿಕತಜ್ಞೆ (ANutr) ಆಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಚಿನ್ ತೆಂಡೂಲ್ಕರ್ ಫೌಂಡೇಶನ್‌ನ ನಿರ್ದೇಶಕಿಯಾಗಿ ಆರೋಗ್ಯ, ಶಿಕ್ಷಣ ಮತ್ತು ಕ್ರೀಡಾ ತರಬೇತಿ ಕ್ಷೇತ್ರಗಳಲ್ಲಿ ಸಮಾಜಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ‘ಪಿಲಾಟಿಸ್ ಅಕಾಡೆಮಿ x ಸಾರಾ ತೆಂಡೂಲ್ಕರ್’ ಎಂಬ ಫಿಟ್‌ನೆಸ್ ಉದ್ಯಮಕ್ಕೂ ಅವರು ಕಾಲಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗೆ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಸಾರಾ ತೊಟ್ಟಿದ್ದ 1.45 ಲಕ್ಷ ರೂಪಾಯಿ ಮೌಲ್ಯದ ನೀಲಿ ಬಣ್ಣದ ಅಗೋರಾ ಜಾಸ್ಮಿನ್ ಸೀರೆ ನೆಟಿಜನ್‌ಗಳ ಗಮನ ಸೆಳೆದಿತ್ತು. ತಮ್ಮ ನಾದಿನಿ ಸಾನಿಯಾ ಚಂಧೋಕ್ ಅವರೊಂದಿಗೆ ಹಬ್ಬದ ಉಡುಗೆಯಲ್ಲಿದ್ದ ಸಾರಾ ಫೋಟೋಗಳು ಜಾಲತಾಣದಲ್ಲಿ ಹರಿದಾಡಿದ್ದವು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular