HomeKarnatakaಟಿ.ನರಸೀಪುರ ಇನ್ಸ್ ಪೆಕ್ಟರ್ ಹೇಳಿಕೆ ತಿರುಚಿದ ಆರೋಪ: ಖಾಸಗಿ ವಾಹಿನಿಯ ಎಡಿಟರ್ ವಿರುದ್ಧ FIR ದಾಖಲು

ಟಿ.ನರಸೀಪುರ ಇನ್ಸ್ ಪೆಕ್ಟರ್ ಹೇಳಿಕೆ ತಿರುಚಿದ ಆರೋಪ: ಖಾಸಗಿ ವಾಹಿನಿಯ ಎಡಿಟರ್ ವಿರುದ್ಧ FIR ದಾಖಲು

ಮೈಸೂರು: ಗಣೇಶೋತ್ಸವ ಮೆರವಣಿಗೆ ವಿಚಾರವಾಗಿ ಮೈಸೂರು ಜಿಲ್ಲೆಯ ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಅವರ ಹೇಳಿಕೆ ತಿರುಚಿದ ಆರೋಪದಲ್ಲಿ ಸ್ಥಳೀಯ ಖಾಸಗಿ ವಾಹಿನಿಯ ಎಡಿಟರ್ ವಿರುದ್ಧ ಟಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ವಾಹಿನಿ ಎಡಿಟರ್ ಮಂಜುನಾಥ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ಸ್ ಪೆಕ್ಟರ್ ಧನಂಜಯ್ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಂತೆ ಧನಂಜಯ್ ಹೇಳಿಕೆಯನ್ನು ತಿರುಚಿದ ಆರೋಪದ ಮೇಲೆ ಇದೀಗ ಸ್ಥಳೀಯ ಖಾಸಗಿ ವಾಹಿನಿಯ ಎಡಿಟರ್ ವಿರುದ್ಧ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೂರಿನ ಅನ್ವಯ ಬಿಎನ್‌ಎಸ್‌ ಸೆಕ್ಷನ್‌ 353(1) (b)(ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ (ಡಿಜಿಟಲ್ ವಿಧಾನಗಳು) ಸಾರ್ವಜನಿಕರಲ್ಲಿ ಕಿಡಿಗೇಡಿತನ, ಭಯ ಅಥವಾ ಆತಂಕವನ್ನುಂಟುಮಾಡುವ ಸುಳ್ಳು ಮಾಹಿತಿ, ವದಂತಿ ಅಥವಾ ವರದಿಗಳನ್ನು ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು), 353(1)(c) (ಯಾವುದೇ ಧರ್ಮ, ಜಾತಿ, ಭಾಷೆ ಅಥವಾ ಸಮುದಾಯಗಳ ನಡುವೆ ದ್ವೇಷ, ಅಸಹ್ಯ ಅಥವಾ ವೈಮನಸ್ಸನ್ನು ಉತ್ತೇಜಿಸುವ ಉದ್ದೇಶದಿಂದ ಹೇಳಿಕೆಗಳನ್ನು ನೀಡುವುದು ಅಥವಾ ಪ್ರಕಟಿಸುವುದು) ಅಡಿ ಎಫ್‌ಐಆರ್‌ ದಾಖಲಾಗಿದೆ.

ಸಭೆಯಲ್ಲಿ ಮಾಧ್ಯಮದವರು ಸಂಪೂರ್ಣ ಭಾಷಣವನ್ನು ಚಿತ್ರೀಕರಿಸಿಕೊಂಡಿದ್ದರು. ಆದರೆ ಟಿ.ನರಸೀಪುರದ ಸ್ಥಳೀಯ ವಾಹಿನಿ ಎಡಿಟರ್ ಮಂಜುನಾಥ್ ಇಡೀ ಭಾಷಣವನ್ನು ಪ್ರಸಾರ ಮಾಡದೇ, ಕೇವಲ 9-10 ನಿಮಿಷಗಳ ಕೊನೆಯ ಭಾಗವನ್ನು ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಿದ್ದಾರೆ. “ಮಸೀದಿ ರಸ್ತೆಯಲ್ಲಿ ಹೋದರೆ ನಿಮ್ಮ ಗ್ರಹಚಾರ ಬಿಡಿಸುತ್ತೇನೆ” ಎಂಬಂತೆ ಬಿಂಬಿಸುವ ಕೆಲವೇ ನಿಮಿಷಗಳ ತುಣುಕನ್ನು ಇನ್‌ಸ್ಟಾಗ್ರಾಮ್ ಖಾತೆಗೆ ಅಪ್ಲೋಡ್ ಮಾಡಿದ್ದರು ಎನ್ನಲಾಗಿದೆ.

ತಿರುಚಲಾದ ಈ ವಿಡಿಯೋವನ್ನು ನೈಜವೆಂದು ಭಾವಿಸಿದ ಸಾರ್ವಜನಿಕರು ಹಾಗೂ ಇತರರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಡೌನ್‌ಲೋಡ್ ಮಾಡಿ ಹಂಚಿಕೊಂಡ ಪರಿಣಾಮ ವಿಡಿಯೋ ವೈರಲ್ ಆಗಿತ್ತು. ಇದು ಗುಂಪುಗಳ ನಡುವೆ ದ್ವೇಷ ಉಂಟುಮಾಡುವ, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಹಾಗೂ ಮುಂಬರುವ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುವ ಉದ್ದೇಶ ಹೊಂದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 7ರಂದು ಎಲ್ಲಾ ಸಮುದಾಯದ ಮುಖಂಡರ ಶಾಂತಿ ಸಭೆ ಕರೆಯಲಾಗಿತ್ತು. ಈ ವೇಳೆ ಇನ್ಸ್ ಪೆಕ್ಟರ್ ಧನಂಜಯ್ ಅವರು ಹಿಂದಿನ ವರ್ಷ ಅನುಮತಿ ಇಲ್ಲದೆ ಗಣಪತಿ ಪ್ರತಿಷ್ಠಾಪಿಸಿ, ಮಸೀದಿ ರಸ್ತೆಯಲ್ಲಿ ಕಾನೂನುಬಾಹಿರವಾಗಿ ಡ್ಯಾನ್ಸ್ ಮಾಡಿ, ಪ್ರಚೋದನಕಾರಿ ಘೋಷಣೆ ಕೂಗಿ ಗಲಭೆಗೆ ಪ್ರಚೋದನೆ ನೀಡಿದ್ದ ಕೆಲ ಯುವಕರ ಕೃತ್ಯಗಳನ್ನು ಉಲ್ಲೇಖಿಸಿ ನಿಯಮ ಪಾಲನೆ ಕುರಿತು ಎಚ್ಚರಿಕೆ ನೀಡಿದರು. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಪಡೆಯಬೇಕು ಹಾಗೂ ಯಾವುದೇ ಶಾಂತಿ, ಸುವ್ಯವಸ್ಥೆಗೆ ಧಕ್ಕೆಯಾಅಗದಂತೆ ಹಬ್ಬ ಆಚರಣೆ ಮಾಡಬೇಕು ಎಂದು ಖಡಕ್ ಆಗಿ ಹೇಳಿದ್ದರು. ಧನಂಜಯ್ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತಲ್ಲದೇ ವಿವಾದಕ್ಕೆ ಕಾರಣವಾಗಿತ್ತು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular