HomeKarnatakaಕನಕಪುರ ಹಾಸ್ಟೆಲ್ ಗೆ ಸಿಎಂ ದಿಢೀರ್ ಭೇಟಿ: ಊಟ ಮಾಡಿ ಆಹಾರ ಗುಣಮಟ್ಟ ಪರಿಶೀಲನೆ, ವಿದ್ಯಾರ್ಥಿಗಳೊಂದಿಗೆ...

ಕನಕಪುರ ಹಾಸ್ಟೆಲ್ ಗೆ ಸಿಎಂ ದಿಢೀರ್ ಭೇಟಿ: ಊಟ ಮಾಡಿ ಆಹಾರ ಗುಣಮಟ್ಟ ಪರಿಶೀಲನೆ, ವಿದ್ಯಾರ್ಥಿಗಳೊಂದಿಗೆ ಚರ್ಚೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ರಾತ್ರಿ ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ, ಸ್ವತಃ ಊಟ ಮಾಡುವ ಮೂಲಕ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದ್ದಾರೆ.

ಊಟದ ಗುಣಮಟ್ಟದಿಂದ ಹಿಡಿದು ವಸತಿ ವ್ಯವಸ್ಥೆ, ಮೂಲಭೂತ ಸೌಕರ್ಯಗಳು, ಉಚಿತ ಬಸ್ ಪಾಸ್ ಹಾಗೂ ಸ್ಕಾಲರ್‌ಶಿಪ್‌ ಸೇರಿದಂತೆ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಅವರಿಂದಲೇ ಮಾಹಿತಿ ಪಡೆದುಕೊಂಡಿದ್ದಾರೆ.

ಕಲಬುರಗಿ, ರಾಯಚೂರು, ಹಾವೇರಿ, ಬೀದರ್, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಆಗಮಿಸಿ ವಿದ್ಯಾಭ್ಯಾಸ ಮಾಡುತ್ತಿರುವ ನಮ್ಮ ಮಕ್ಕಳು, ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಅವರ ಬದುಕಿನಲ್ಲಿ ಯಾವುದೇ ಕೊರತೆ ಅಡ್ಡಿಯಾಗಬಾರದು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದ್ಯಾರ್ಥಿ ನಿಲಯದಲ್ಲಿನ ಕೆಲವು ಕುಂದು-ಕೊರತೆಗಳ ಕುರಿತು ಸಿಬ್ಬಂದಿ ವರ್ಗದವರು ನನ್ನ ಗಮನಕ್ಕೆ ತಂದಿದ್ದು, ಈ ಕುರಿತು ಡೆಪ್ಯೂಟಿ ಕಮಿಷನರ್‌ ಹಾಗೂ ಸಿಇಓಗೆ ಹೇಳಿ ಮತ್ತೊಮ್ಮೆ ಪರಿಶೀಲನೆ ನಡೆಸಿ, ಅಗತ್ಯ ನೆರವು ಹಾಗೂ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದೇನೆ. ನಮ್ಮ ನಾಡಿನ ಪ್ರತಿಯೊಬ್ಬ ಮಗುವಿನ ಕನಸಿಗೂ ರೆಕ್ಕೆ ನೀಡುವುದು, ಅವರಿಗೆ ಉತ್ತಮ ಶಿಕ್ಷಣ ಹಾಗೂ ಉತ್ತಮ ಭವಿಷ್ಯ ರೂಪಿಸುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೊಸ ತಂತ್ರಜ್ಞಾನ, ಪ್ರತಿಭೆಗಳ ಪೋಷಣೆ

ಹೊಸ ತಂತ್ರಜ್ಞಾನ, ಪ್ರತಿಭೆಗಳ ಪೋಷಣೆ ಮತ್ತು ಸಂಶೋಧನೆಯ ಬಲದೊಂದಿಗೆ ಕರ್ನಾಟಕವು ಭವಿಷ್ಯವನ್ನು ರೂಪಿಸುತ್ತಿದೆ. ನುರಿತ ಮಾನವ ಸಂಪನ್ಮೂಲ, ಸುಧಾರಿತ ತಂತ್ರಜ್ಞಾನ ಹಾಗೂ ವಿಶ್ವದರ್ಜೆಯ ಮೂಲಸೌಕರ್ಯಗಳ ಮೂಲಕ ನವೀನ ಆವಿಷ್ಕಾರಗಳಲ್ಲಿ ರಾಜ್ಯದ ಮುಂಚೂಣಿ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಾಗುತ್ತಿದೆ. ಹೊಸ ತಂತ್ರಜ್ಞಾನ, ಪ್ರತಿಭೆಗಳ ಪೋಷಣೆ ಮತ್ತು ಸಂಶೋಧನೆಯ ಬಲದೊಂದಿಗೆ ಕರ್ನಾಟಕವು ಭವಿಷ್ಯವನ್ನು ರೂಪಿಸುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

 ನುರಿತ ಮಾನವ ಸಂಪನ್ಮೂಲ, ಸುಧಾರಿತ ತಂತ್ರಜ್ಞಾನ ಹಾಗೂ ವಿಶ್ವದರ್ಜೆಯ ಮೂಲಸೌಕರ್ಯಗಳ ಮೂಲಕ ನವೀನ ಆವಿಷ್ಕಾರಗಳಲ್ಲಿ ರಾಜ್ಯದ ಮುಂಚೂಣಿ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಾಗುತ್ತಿದೆ.

ಜನಪರ ಆಡಳಿತಕ್ಕೆ ಉತ್ತಮ ಸಾರ್ವಜನಿಕ ಆರೋಗ್ಯವೇ ಅಡಿಪಾಯ. ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ, ಮತ್ತು ಕೈಗೆಟುಕುವ ದರದಲ್ಲಿ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಲು ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲಾಗುತ್ತಿದೆ.

ಸುಸಜ್ಜಿತ ಆಸ್ಪತ್ರೆಗಳು, ಆಧುನಿಕ ತಂತ್ರಜ್ಞಾನ, ತುರ್ತು ಚಿಕಿತ್ಸೆ, ತಜ್ಞ ವೈದ್ಯರ ನೆರವು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಆರೋಗ್ಯವಂತ ಮತ್ತು ಸದೃಢ ಕರ್ನಾಟಕವನ್ನು ಕಟ್ಟುವುದು ಸರ್ಕಾರದ ಗುರಿ. ಜನಪರ ಆಡಳಿತಕ್ಕೆ ಉತ್ತಮ ಸಾರ್ವಜನಿಕ ಆರೋಗ್ಯವೇ ಅಡಿಪಾಯ. ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ, ಮತ್ತು ಕೈಗೆಟುಕುವ ದರದಲ್ಲಿ ಸೂಕ್ತ ಚಿಕಿತ್ಸೆ ದೊರೆಯುವಂತೆ ಮಾಡಲು ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲಾಗುತ್ತಿದೆ. ಸುಸಜ್ಜಿತ ಆಸ್ಪತ್ರೆಗಳು, ಆಧುನಿಕ ತಂತ್ರಜ್ಞಾನ, ತುರ್ತು ಚಿಕಿತ್ಸೆ, ತಜ್ಞ ವೈದ್ಯರ ನೆರವು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಆರೋಗ್ಯವಂತ ಮತ್ತು ಸದೃಢ ಕರ್ನಾಟಕವನ್ನು ಕಟ್ಟುವುದು ಸರ್ಕಾರದ ಗುರಿ ಎಂದು ಸಿಎಂ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular