ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಹೊಸ ಸರ್ಕಾರ ರಚನೆಗೆ ಪ್ರಕ್ರಿಯೆ ಆರಂಭವಾಗಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ ಆರಂಭವಾಗಿದೆ. ಸಭೆಗೂ ಮುನ್ನ ವಿಧಾನಸೌಧದಲ್ಲಿ ಡಿ.ಕೆ.ಶಿವಕುಮಾರ್ ಆರಾಧ್ಯ ದೈವ ಅಜ್ಜಯ್ಯನ ಪೂಜೆ ನೆರವೇರಿಸಿದ್ದಾರೆ.
ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ವಿಧಾನಸೌಧದ ಕೊಠಡಿಯಲ್ಲಿ ಡಿ.ಕೆ.,ಶಿವಕುಮಾರ್ ಎಲ್ಲರನ್ನೂ ಹೊರ ಕಳುಹಿಸಿ ಅಜ್ಜಯ್ಯನ ಪೂಜೆ ನೆರವೇಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇಂದು ಬೆಳಿಗ್ಗೆ ಕೂಡ ನಾಗರಬಾವಿಯಲ್ಲಿರುವ ನೊಣವಿನಕೆರೆ ಶಾಖಾ ಮಠದಲ್ಲಿ ಅಜ್ಜಯ್ಯನ ದರ್ಶನ ಪಡೆದು ಆಶಿರ್ವಾದ ಪಡೆದು ಆಗಮಿಸಿರುವ ಡಿ,ಕೆ.ಶಿವಕುಮಾರ್, ಸಿಎಲ್ ಪಿ ಸಭೆಗೂ ಮೊದಲು ವಿಧಾನಸೌಧದ ಕೊಠಡಿಯಲ್ಲಿ ಅಜ್ಜಯನಿಗೆ ಪೂಜೆ ನೆರವೇಸಿದ್ದು ವಿಶೇಷವಾಗಿದೆ.
ಕೆಲವೇ ಸಮಯದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭವಾಗಲಿದೆ. ಕಾಂಗ್ರೆಸ್ ವೀಕ್ಷಕರಾಗಿ ಕೆ.ಸಿ.ವೇಣುಗೋಪಾಲ್, ಜೈರಾಮ್ ರಮೇಶ್, ರಣದೀಪ್ ಸಿಂಗ್ ಸುರ್ಜೇವಾಲ ಆಗಮಿಸಿದ್ದು, ನಿರೀಕ್ಷೆಯಂತೆ ಡಿ.ಕೆ.ಶಿವಕುಮಾರ್ ಅವರನ್ನು ಅಧಿಕೃವಾಗಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ. ಬಳಿಕ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಮುಂದೆ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

