HomeUncategorizedಟಾಕ್ಸಿಕ್ ಪ್ರಿ ರಿಲೀಸ್‌ನಲ್ಲಿ ಜನಸಾಗರ: ಕಾರ್ಯಕ್ರಮಕ್ಕೆ ಬರದೇ ಇದ್ದರೆ ಕಾಲೇಜಿನವರು ಪರೀಕ್ಷೆ ಬರೆಯಲು ಬಿಡಲ್ಲ ಎಂದು...

ಟಾಕ್ಸಿಕ್ ಪ್ರಿ ರಿಲೀಸ್‌ನಲ್ಲಿ ಜನಸಾಗರ: ಕಾರ್ಯಕ್ರಮಕ್ಕೆ ಬರದೇ ಇದ್ದರೆ ಕಾಲೇಜಿನವರು ಪರೀಕ್ಷೆ ಬರೆಯಲು ಬಿಡಲ್ಲ ಎಂದು ಬೆದರಿಸಿದರು; ಗಂಭೀರ ಆರೋಪ ಮಾಡಿದ ನೆಟ್ಟಿಗ!

ನಿನ್ನೆ ( ಆಗಸ್ಟ್ 22 ) ಹೈದರಾಬಾದ್‌ನ ಪ್ರತಿಷ್ಠಿತ ಮಲ್ಲಾರೆಡ್ಡಿ ಕಾಲೇಜಿನಲ್ಲಿ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಟಾಕ್ಸಿಕ್‌ನ ಪ್ರಿ ರಿಲೀಸ್ ಇವೆಂಟ್ ಆಯೋಜನೆಯಾಗಿತ್ತು. ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಇಡೀ ಚಿತ್ರತಂಡ ಈ ಕಾರ್ಯಕ್ರಮಕ್ಕೆ ಆಗಮಿಸಿತ್ತು.

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಕಣ್ತುಂಬಿಕೊಳ್ಳಲು ಮಲ್ಲಾರೆಡ್ಡಿ ಕಾಲೇಜು ಮೈದಾನದಲ್ಲಿ ಜನಸಾಗರವೇ ಹರಿದುಬಂದಿತ್ತು. ಟಾಕ್ಸಿಕ್ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮದ ವಿಡಿಯೊಗಳು ಹರಿದಾಡತೊಡಗಿದವು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನಸಾಗರ ಕಂಡು ಯಶ್ ಅಭಿಮಾನಿಗಳು ಹಾಗೂ ಕನ್ನಡ ಸಿನಿ ರಸಿಕರು ಸಂತಸ ಹೊರಹಾಕಿದರೆ, ಇನ್ನೂ ಕೆಲವರು ಕಾಲೇಜು ವಿದ್ಯಾರ್ಥಿಗಳನ್ನು ಕರೆತಂದು ಕಾರ್ಯಕ್ರಮಕ್ಕೆ ಜನಸಾಗರ ಬಂದಿದೆ ಎಂಬಂತೆ ಬಿಂಬಿಸಿದ್ದಾರೆ ಎಂದು ಆರೋಪಗಳನ್ನು ಮಾಡಿದರು.

ಯಶ್ ಹೆಸರು ಇದ್ದ ಕಡೆ ಈ ರೀತಿಯ ಟ್ರೋಲ್ ಸಹಜ. ಅವರ ಏಳಿಗೆ ಹಾಗೂ ಖ್ಯಾತಿಯನ್ನು ಸಹಿಸಲಾಗದ ಮಂದಿ ತಮ್ಮ ಕೆಲಸ ಕಾರ್ಯ ಬಿಟ್ಟು ಇಂತಹ ಕಾಮೆಂಟ್ ಮಾಡುವುದು ಹಿಂದಿನಿಂದಲೂ ನಡೆಯುತ್ತಾ ಬಂದಿದೆ.

ಇನ್ನು ನೆಟ್ಟಿಗನೋರ್ವ ಈ ಕುರಿತು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ನಾನು ಮಲ್ಲಾರೆಡ್ಡಿ ಕಾಲೇಜು ವಿದ್ಯಾರ್ಥಿಯಾಗಿದ್ದು, ಟಾಕ್ಸಿಕ್ ಪ್ರಿ ರಿಲೀಸ್ ಇವೆಂಟ್‌ಗೆ ಬಾರದೇ ಇದ್ದರೆ ಪರೀಕ್ಷೆ ಬರೆಯಲು ಬಿಡುವುದಿಲ್ಲ ಎಂದು ಕಾಲೇಜು ಮ್ಯಾನೇಜ್‌ಮೆಂಟ್ ಬೆದರಿಕೆ ಹಾಕಿತು ಎಂದು ಬರೆದುಕೊಂಡಿದ್ದಾನೆ. ಇದಕ್ಕೆ ಹಲವಾರು ಮಂದಿ ಕಾಮೆಂಟ್ ಹಾಕಿದ್ದು, ಹೆಚ್ಚೇನೂ ಬೇಡ, ನೀನು ಈ ಕಾಲೇಜಿನ ವಿದ್ಯಾರ್ಥಿ ಎಂಬುದಕ್ಕೆ ಸಾಕ್ಷಿ ಒದಗಿಸು ಸಾಕು ಎಂದು ಕಾಲೆಳೆದು ಟೀಕಿಸಿದ್ದಾರೆ. ಯಶ್ ವಿರೋಧಿ ಬಣದ ವ್ಯಕ್ತಿ ಈತ ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular