ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಗಾಗ ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಪತ್ನಿ ಹಾಗೂ ಮಗುವಿನೊಂದಿಗೆ ಭೇಟಿ ನೀಡುತ್ತಿರುತ್ತಾರೆ. ಹೀಗೆ ಭೇಟಿ ನೀಡುವ ಕೊಹ್ಲಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ವಿರಾಟ್ ಕೊಹ್ಲಿ ಪ್ರೇಮಾನಂದ್ ಮಹಾರಾಜ್ ಆಶ್ರಮಕ್ಕೆ ಭೇಟಿ ನೀಡಲು 5 ಕೋಟಿ ರೂ. ಹಣ ಪಡೆದಿದ್ದಾರೆ ಎಂಬ ಗಂಭೀರ ಆರೋಪವನ್ನು ಫಲಹರಿ ಮಹಾರಾಜ್ ಎಂದೇ ಪ್ರಸಿದ್ಧರಾಗಿರುವ ದಿನೇಶ್ ಶರ್ಮಾ ಅವರು ಮಾಡಿದ್ದಾರೆ. ದಿನೇಶ್ ಶರ್ಮಾ ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ಟ್ರಸ್ಟ್ನ ಅಧ್ಯಕ್ಷರೂ ಆಗಿದ್ದು, ಅವರ ಈ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿದೆ. ಕೊಹ್ಲಿ 5 ಕೋಟಿ ಹಣ ಪಡೆದು ಪ್ರೇಮಾನಂದ ಮಹಾರಜ್ ಆಶ್ರಮಕ್ಕೆ ಭೇಟಿ ನೀಡುತ್ತಾರೆ ಎಂಬ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬೆಳಾವಣಿಗೆ ಬೆನ್ನಲ್ಲೇ ಕೊಹ್ಲಿಯ ಮಾಧ್ಯಮ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.
ವಿರಾಅಟ್ ಕೊಹ್ಲಿ ಹಣ ಪಡೆದು ಆಶ್ರಕ್ಕೆ ಭೇಟಿ ನೀಡಿದ್ದಾರೆ ಎಖ್ಂಬುದು ಸುಳ್ಳು ಸುದ್ದಿ. ಅವರು ಹಣ ಪಡೆದು ಭೇಟಿ ನೀಡಿಲ್ಲ ಎಂದು ಹೇಳುವ ಮೂಲಕ ವಿವಾದಗಳಿಗೆ ತೆರೆ ಎಳೆದಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ 2023 ರಲ್ಲಿ ಮೊದಲ ಬಾರಿಗೆ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ರಾಜಸ್ಥಾನದ ಖಾಸಗಿ ಕಂಪನಿಯೊಂದು ವಿರಾಟ್ ಕೊಹ್ಲಿಯನ್ನು ಆಶ್ರಮಕ್ಕೆ ಕರೆತರಲು 5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು ಎಂದು ಫಲಹರಿ ಮಹಾರಾಜ್ ದಿನೇಶ್ ಶರ್ಮಾ ಆರೋಪ ಮಾಡಿದ್ದರು. ಅಲ್ಲದೆ ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಪತ್ರವನ್ನೂ ಸಹ ಬರೆದಿದ್ದರು. ಆದರೆ ದಿನೇಶ್ ಶರ್ಮಾ ಅವರ ಹೇಳಿಕೆ ಆಧಾರರಹಿತವಾಗಿದ್ದು, ಸಂಪೂರ್ಣವಾಗಿ ಸುಳ್ಳು ಸುದ್ದಿ ಎಂದು ಕೊಹ್ಲಿ ಅವರ ಮಾಧ್ಯಮ ವಕ್ತಾರರು ಸ್ಪಷ್ಟ ಪಡಿಸಿದ್ದಾರೆ.
ದಿನೇಶ್ ಶರ್ಮಾ ಹೇಳಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ ಕೊಹ್ಲಿ ವಕ್ತಾರರು, ಕೊಹ್ಲಿ ಮತ್ತು ಪ್ರೇಮಾನಂದ ಮಹಾರಾಜ್ ಅವರ ಸಂಬಂಧವು ವೈಯಕ್ತಿಕ ನಂಬಿಕೆ ಮತ್ತು ಭಕ್ತಿಯನ್ನು ಆಧರಿಸಿದೆ. ಹೀಗಾಗಿ ಫಲಹರಿ ಮಹಾರಾಜ್ ದಿನೇಶ್ ಶರ್ಮಾ ಅವರು ವಿರಾಟ್ ಕೊಹ್ಲಿ ಬಗ್ಗೆ ಮಾಡಿರುವ ಆರೋಪಗಳು ಸಂಪೂರ್ಣವಾಗಿ ಸುಳ್ಳು, ಆಧಾರರಹಿತ ಎಂದು ನಾವು ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ. ವಿರಾಟ್ ಕೊಹ್ಲಿ ಪ್ರೇಮಾನಂದ ಮಹಾರಾಜ್ ಜಿ ಅವರನ್ನು ನಂಬಿಕೆ ಮತ್ತು ಭಕ್ತಿಯಿಂದ ಮಾತ್ರ ಭೇಟಿ ಮಾಡುತ್ತಾರೆ ಎಂದಿದ್ದಾರೆ.
ಮಾಧ್ಯಮಗಳು ಹಾಗೂ ಪತ್ರಕರ್ತರು ಇಂತಹ ಹೇಳಿಕೆಗಳನ್ನು ವರದಿ ಮಾಡುವ ಅಥವಾ ಭಿತ್ತರಿಸುವ ಮೊದಲು ಎಚ್ಚರಿಕೆಯಿಂದಿರಬೇಕು ಮತ್ತು ಸತ್ಯಗಳನ್ನು ಪರಿಶೀಲಿಸಬೇಕು. ನಾವು ಈ ಹೇಳಿಕೆಗಳನ್ನು ನಿರಾಕರಿಸುತ್ತೇವೆ ಮತ್ತು ಅಂತಹ ಮಾಹಿತಿಯನ್ನು ವರದಿ ಮಾಡುವ ಅಥವಾ ಹರಡುವ ಮೊದಲು ಎಚ್ಚರಿಕೆ ವಹಿಸಲು, ಸತ್ಯಗಳನ್ನು ಪರಿಶೀಲಿಸಲು ಮತ್ತು ಜವಾಬ್ದಾರಿಯುತವಾಗಿ ವರದಿ ಮಾಡಲು ಮಾಧ್ಯಮಗಳನ್ನು ಒತ್ತಾಯಿಸುತ್ತೇವೆ ಎಂದಿದ್ದಾರೆ.

